newsics.com
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಇನ್ನೇನೋ ಫಿನಾಲೆಗೆ ಹತ್ತಿರ ಬರುತ್ತಿದೆ. ಸದ್ಯ ಬಿಗ್ ಮನೆಯಲ್ಲಿ ಭವ್ಯಾ ಗೌಡ, ಉಗ್ರಂ ಮಂಜು, ತ್ರಿವಿಕ್ರಮ್, ಧನರಾಜ್, ಹನುಮಂತ, ರಜತ್, ಗೌತಮಿ, ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಪೈ ಉಳಿದುಕೊಂಡಿದ್ದಾರೆ.
ಈ ಮಧ್ಯೆ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಭವ್ಯಾ ಗೌಡ ಹಾಗೂ ಉಗ್ರಂ ಮಂಜು ನಡುವೆ ಸಖತ್ ವಾರ್ ನಡೆದಿದೆ. ನಕರಾತ್ಮಕ ಗುಣಗಳು ಒಂದು ರೀತಿಯ ರೋಗವೇ ಸರಿ. ಆ ರೋಗಗಳಿಗೆ ಅನುಗುಣವಾಗಿ ಕಷಾಯವನ್ನು ಕುಡಿಸಬೇಕು ಅಂತ ಬಿಗ್ಬಾಸ್ ಹೇಳಿದ್ದರು.
https://www.instagram.com/reel/DEMpKEtO9sl/?igsh=OXgyaHJkZ2xzcmJu
ಅದರಂತೆ ಭವ್ಯಾ ಗೌಡ ಉಗ್ರಂ ಮಂಜುಗೆ ದುರಹಂಕಾರ ನಿರ್ವಹಣೆ ಕಷಾಯವನ್ನು ಕುಡಿಸಿದ್ದಾರೆ. ನಾನು ಅಂತ ತುಂಬಾ ನಿಮಗೆ ದುರಹಂಕಾರ ಇದೆ ಅಂತ ಹೇಳಿದ್ದಾರೆ. ಅಲ್ಲದೇ ನಾನು ಇಷ್ಟು ಚಿಕ್ಕೋಳು ಆದ್ರು ಎಲ್ಲರ ಸರಿ ಸಮಾನವಾಗಿ ನಿಂತಿದ್ದೀನಿ ಅಂತ ಮಂಜುಗೆ ಟಾಂಗ್ ಕೊಟ್ಟಿದ್ದಾರೆ. ಆಗ ಮಂಜು ನಾನು ಇರೋದೇ ಹಿಂಗೆ ನೀನು ನನಗೆ ಹೇಳೋದು ಬೇಡ, ನಿನಗೆ ಇದೆ ದುರಹಂಕಾರ ಎಂದು ಹೇಳಿದ್ದಾರೆ. ದುರಹಂಕಾರ ಒಪ್ಪಿಕೊಳ್ಳದ ಮಂಜು ಭವ್ಯಾ ಗೌಡ ಮೇಲೆ ಕೆಂಡ ಹಾಕಿದ್ದಾರೆ. ಇದೇ ವಿಚಾರಕ್ಕೆ ಈ ಇಬ್ಬರ ಮಧ್ಯೆ ಜೋರು ಗಲಾಟೆ ನಡೆದಿದೆ.