newsics.com
ಕಾರವಾರ : ಕೋಲಾರ ಮೂಲದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಕೊಚ್ಚಿ ಹೋಗಿ ಸಾವನಪ್ಪಿರುವ ಹಿನ್ನೆಲೆಯಲ್ಲಿ ಮುರ್ಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಸುರಕ್ಷತೆ ಕ್ರಮ ಇದುವರೆಗೂ ಕೈಗೊಂಡಿಲ್ಲ. ಪ್ರಮುಖವಾಗಿ ಮುರ್ಡೇಶ್ವರ ಕಡಲ ತೀರ ದೇವಸ್ಥಾನ ಪಕ್ಕದಲ್ಲೆ ಇರುವುದರಿಂದ ಒಂದೇ ಸಮಯದಲ್ಲಿ ಸುಮಾರು ಎರಡರಿಂದ ಮೂರು ಸಾವೀರ ಜನ ಬೀಚ್ ಗೆ ಇಳಿಯುತ್ತಾರೆ. ಇಷ್ಟು ದೋಡ್ಡ ಸಂಖ್ಯೆಯ ಜನರ ಸುರಕ್ಷತೆಗಾಗಿ ಕ್ರಮ ಕೈಗೊಂಡು ಗೋವಾ ಮಾದರಿಯಲ್ಲಿ ಸುರಕ್ಷತೆ ಕ್ರಮ ಕೈಗೊಂಡು ಆದಷ್ಟು ಬೇಗ ಬೀಚ್ ಓಪನ್ ಮಾಡುವಂತೆ ಜಿಲ್ಲಾ ಉಸ್ತುವರಿ ಸಚಿವ ಮಂಕಾಳು ವೈದ್ಯ ಸೂಚಿಸಿದ್ದಾರೆ. ಆದ್ರೆ, ಪ್ರವಾಸಿಗರ ಸುರಕ್ಷತೆ ಕೈಗೊಳ್ಳುವಲ್ಲಿ ತಾಲೂಕಾಡಳಿತ ವಿಫಲವಾಗಿದೆ.
ಹೊಸ ವರ್ಷಚರಣೆ ನಿಮಿತ್ತ ಪ್ರತಿ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುರ್ಡೇಶ್ವರ ಕಡಲ ತೀರಕ್ಕೆ ಜನ ಭೇಟಿ ನೀಡುತ್ತಿದ್ದರು. ಇದರಿಂದ ಸ್ಥಳಿಯವಾಗಿ ಚಿಕ್ಕ ಪುಟ್ಟ ಅಂಗಡಿಗಳನ್ನ ಹಾಕಿ ಜೀವನ ಮಾಡುತ್ತಿದ್ದ ಸಾವಿರಾರು ಕುಟುಂಬಗಳು ಜೀವನ ಮಾಡುತ್ತಿದ್ದವು. ಆದ್ರೆ ಸುರಕ್ಷತೆಯ ನೇಪ ಹೇಳಿ ಕಳೆದ 19 ದಿನಗಳಿಂದ ಬೀಚ್ ಕ್ಲೋಸ್ ಮಾಡಿ ಯಾವುದೇ ಸೂಕ್ತ ಸುರಕ್ಷತೆಯನ್ನ ಕೈ ಗೊಳ್ಳದೆ ಭಟ್ಕಳ ತಾಲೂಕಾಡಳಿತ ಬೇಜವಾಬ್ದಾರಿ ನಡೆಯಿಂದ ಸ್ಥಳಿಯರು ಆಕ್ರೋಶಿತರಾಗಿದ್ದಾರೆ. ನಿಮ್ಮಗಳ ನಿರ್ಲಕ್ಷ್ಯದಿಂದ ನಮ್ಮ ಹೊಟ್ಟೆಗೆ ತಣ್ಣಿರ ಬಟ್ಟೆ ಬಿದ್ದಿದೆ ಎಂದು ಗೋಳಾಡುತ್ತಿದ್ದಾರೆ.
ನೂರಾರು ಕಿ.ಮೀ ದೂರದಿಂದ ಬೀಚ್ ನಲ್ಲಿ ಎಂಜಾಯ್ ಮಾಡಬೇಕೆಂದು, ಶೈಕ್ಷಣಿಕ ಪ್ರವಾಸದ ನಿಮಿತ್ಯ ಮುರ್ಡೇಶ್ವರಕ್ಕೆ ಬರುವ ಸಾವಿರಾರು ವಿದ್ಯಾರ್ಥಿಗಳು ಸೊಪ್ಪೆ ಮೊರೆ ಮಾಡಿಕೊಂಡು ಹಿಂತಿರುಗುತ್ತಿದ್ಧಾರೆ. ಇನ್ನೂ ಯುವ ಯುವತಿಯರು ನವ ಜೋಡಿಗಳಂತೂ ನೂರಾರು ಕಿ.ಮೀ ದೂರದಿಂದ ಬಂದ್ರು ಎಂಜಾಯ್ ಮಾಡಲಾಗಲಿಲ್ಲ ಎಂದು ಬೇರೆ ಬೀಚ್ ಗಳತ್ತ ಮುಖ ಮಾಡುತ್ತಿದ್ದಾರೆ.