newsics.com
ಕೆಲವು ಮದುವೆ ಸಮಾರಂಭಗಳು ವಿಶೇಷತೆಗಳಿಂದ ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ಈ ವೈರಲ್ ಆಗಿರುವ ವಿಡಿಯೋ ಪಾಕಿಸ್ತಾನದಲ್ಲಿ ವರನ ತಂದೆ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ವಧುವಿನ ಮನೆಯ ಮೇಲೆ ಲಕ್ಷಾಂತರ ರೂಪಾಯಿ ನೋಟಿನ ಮಳೆಗೈದಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವರನ ತಂದೆ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ಪಡೆದು ವಧುವಿನ ಮನೆಯ ಮೇಲೆ ನೋಟಿನ ಮಳೆಗೈದಿದ್ದಾರೆ. ಆಕಾಶದಲ್ಲಿ ಹಾರಾಡುತ್ತಿರುವ ವಿಮಾನದಿಂದ ನೋಟನ್ನು ಬೀಳಿಸುತ್ತಿರುವ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಈ ಘಟನೆಯೂ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ನಲ್ಲಿ ನಡೆದಿದೆ ಎನ್ನಲಾಗಿದೆ.
ಈ ವಿಡಿಯೋವನ್ನು amalqa ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ವರನ ತಂದೆ ತನ್ನ ಮಗನ ಮದುವೆಗೆ ವಿಮಾನವನ್ನು ಬಾಡಿಗೆಗೆ ತೆಗೆದುಕೊಂಡು ವಧುವಿನ ಮನೆಯ ಮೇಲೆ ನೋಟಿನ ಮಳೆಗೈದಿದ್ದಾರೆ. ವರನು ತನ್ನ ತಂದೆಯ ಋಣವನ್ನು ತನ್ನ ಜೀವನದುದ್ದಕ್ಕೂ ತೀರಿಸುತ್ತಾನೆ ಎಂದು ಶೀರ್ಷಿಕೆ ನೀಡಲಾಗಿದೆ.
ಈ ವೀಡಿಯೊದಲ್ಲಿ ವಿಮಾನವು ಆಕಾಶದಲ್ಲಿ ಹಾರುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಸ್ವಲ್ಪ ಸಮಯದ ನಂತರ ಈ ವಿಮಾನದಿಂದ ರಾಶಿ ರಾಶಿ ನೋಟುಗಳು ಬೀಳುವುದನ್ನು ನೋಡಬಹುದು.
ಈ ವಿಡಿಯೋವು ಲಕ್ಷಾನುಗಟ್ಟಲೇ ವೀಕ್ಷಣೆಯನ್ನು ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ಗಳನ್ನು ಮಾಡಿದ್ದಾರೆ.
https://www.instagram.com/reel/DEFWgGbSoTx/?igsh=NXU1Y282NHdnaWY5
Chhatrapati Shivaji ಲಡಾಖ್ ನಲ್ಲಿ 30 ಅಡಿ ಎತ್ತರದ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ