newsics.com
ಬೆಂಗಳೂರು : ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 5 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಝೊಮ್ಯಾಟೊ ತಿಳಿಸಿದೆ.
ಡೈನಿಂಗ್ ಔಟ್ ವಿಭಾಗದಲ್ಲಿ ಈ ವರ್ಷ ಝೊಮ್ಯಾಟೊ ಮೂಲಕ ರೆಸ್ಟೋರೆಂಟ್‌ಗಳಲ್ಲಿ ಒಂದು ಕೋಟಿಗೂ ಹೆಚ್ಚು ಟೇಬಲ್‌ಗಳನ್ನು ಮುಂಗಡ ಬುಕ್ ಮಾಡಲಾಗಿತ್ತು ಎಂದು ಝೊಮ್ಯಾಟೊ ವರದಿ ತಿಳಿಸಿದೆ. ಇದರಲ್ಲಿ, 84,866 ಜನರು ಫಾದರ್ಸ್ ಡೇ ದಿನದಂದು ತಮ್ಮ ತಂದೆಯನ್ನು ಲಂಚ್ ಅಥವಾ ಡಿನ್ನರ್‌ಗೆ ಕರೆದುಕೊಂಡು ಹೋಗಲು ಮುಂಗಡ ಟೇಬಲ್ ಬುಕ್ ಮಾಡಿದ್ದಾರೆ .
ಇನ್ನೂ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ಆಹಾರ ಪ್ರೇಮಿಯೊಬ್ಬರು ಒಂದೇ ಬಾರಿಗೆ 5 ಲಕ್ಷ ರೂ ಬಿಲ್ ಪಾವತಿಸಿದ್ದಾರೆ. ಝೊಮ್ಯಾಟೊ ಪ್ರಕಾರ ಆ ವ್ಯಕ್ತಿ ಒಂದು ಹೊತ್ತಿನ ಊಟಕ್ಕೆ ನಿಖರವಾಗಿ 5.13 ರೂ. ಖರ್ಚು ಮಾಡಿದ್ದಾರೆ. ಒಂದೇ ಬಾರಿಗೆ ಇಷ್ಟು ದುಬಾರಿ ಬಿಲ್ ಪಾವತಿಸಿದ್ದು ನಮ್ಮಲ್ಲಿ ಇದೇ ಮೊದಲು ಎಂದು ಝೊಮ್ಯಾಟೊ ಹೇಳಿದೆ