newsics.com
ಬಾಗಲಕೋಟೆ/ಬೆಳಗಾವಿ/ಉಡುಪಿ: ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಕರ್ನಾಟಕ ಮೂಲದ ಮೂವರು ಸೈನಿಕರು ಕೂಡ ಸಾವನ್ನಪ್ಪಿದ್ದಾರೆ. ಮಣಿಪುರದಲ್ಲಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಚಿಕ್ಕೋಡಿಯ ಇನ್ನೋರ್ವ ಯೋಧ ಮೃತಪಟ್ಟಿದ್ದಾರೆ.
ಮಂಗಳವಾರ ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ವಾಹನ ಕಂದಕಕ್ಕೆ ಉರುಳಿಬಿದ್ದು ಐವರು ಯೋಧರು ಸಾವನ್ನಪ್ಪಿ, ಐವರು ತೀವ್ರವಾಗಿ ಗಾಯಗೊಂಡ ದುರ್ಘಟನೆ ಸಂಭವಿಸಿತ್ತು.
ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ಮಾರಿಗೊಂಡ (25), ಬೆಳಗಾವಿ ತಾಲೂಕಿನ ಪಂತನಗರದ ಯೋಧ ದಯಾನಂದ ತಿರಕಣ್ಣವರ (44) ಹಾಗೂ ಕುಂದಾಪುರದ ಅನೂಪ್ ಎಂಬುವರು ದುರಂತದಲ್ಲಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಮಹೇಶ್ ಮಾರಿಗೊಂಡ ಅವರು 11ನೇ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೈನಿಕರನ್ನು ಹೊತ್ತ ವಾಹನವು ಮೆಂಡರ್ ಎಂಬ ಪ್ರದೇಶಕ್ಕೆ ಕರ್ತವ್ಯಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ.
ಬೆಳಗಾವಿಯ ದಯಾನಂದ ಕಲ್ಲಪ್ಪ ತಿರಕನ್ನವರ ಅವರು ಭಾರತೀಯ ಸೇನೆಯ 11ನೇ ಮರಾಠಾ ಲಘು ಪದಾತಿದಳದ ಮಿಂಡರ್ದಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ಇನ್ನು ಎರಡು ವರ್ಷಗಳಲ್ಲಿ ಸೇವೆಯಿಂದ ನಿವೃತ್ತಿ ಆಗಲಿದ್ದರು.
ಮತ್ತೊಂದು ಘಟನೆಯಲ್ಲಿ, ಮಣಿಪುರದ ಇಂಪಾಲ್ ಜಿಲ್ಲೆಯ ಬೊಂಬಾಲಾದಲ್ಲಿJOIN ನ್ಯೂಸಿಕ್ಸ್
https://chat.whatsapp.com/BtXt3kqUBdh2Gayg0FmmNg
https://chat.whatsapp.com/K95wTKgdELiBNHespE8Ph8
Follow ನ್ಯೂಸಿಕ್ಸ್
https://whatsapp.com/channel/0029VaA3vs20rGiQGVGF0k3X
Telegram: https://t.me/newsicsofficial
Signal
https://signal.group/#CjQKIF7Lg_S9tegiaXdDiMx-EZ82_FpS6IfnVhMicjenPUtsEhBBvn7iWm4KCSEWQZWJUl6b
*ನ್ಯೂಸಿಕ್ಸ್: ಗುಣಮಟ್ಟದ ಸುದ್ದಿ ತಾಣ*ಕಂದಕಕ್ಕೆ ಸೇನಾ ವಾಹನ ಉರುಳಿ ಚಿಕ್ಕೋಡಿ ತಾಲೂಕಿನ ಕುಪ್ಪಾನವಾಡಿ ಗ್ರಾಮದ ಯೋಧ ಧರ್ಮರಾಜ ಖೋತ (43) ಅವರು ಮೃತಪಟ್ಟಿದ್ದಾರೆ. ಕರ್ತವ್ಯ ಮುಗಿಸಿ ಬರುತ್ತಿರುವಾಗ ಅವಘಡ ನಡೆದಿತ್ತು. ಅವರು ಇನ್ನು 2-3 ತಿಂಗಳಲ್ಲಿ ನಿವೃತ್ತಿ ಆಗಲಿದ್ದರು. ಒಟ್ಟು 6 ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಇದಾಗಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
https://x.com/CMofKarnataka/status/1871808199726096752
https://x.com/adgpi/status/1871798575404843228
Nandini Product ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ, ದೋಸೆ ಹಿಟ್ಟು ಬಿಡುಗಡೆ
Bigg Boss Kannada ನಿನ್ನೆ ಆಳಾಗಿದ್ದವರು ಇಂದು ಅತಿಥಿ: ಚೈತ್ರಾ ಮೇಲೆ ರಜತ್ ರಿವೆಂಜ್
CT Ravi Case: ಸಿಟಿ ರವಿ ಅರೆಸ್ಟ್ ಕೇಸ್; ಖಾನಾಪುರ ಸಿಪಿಐ ಸಸ್ಪೆಂಡ್