newsics.com
ಚಳಿಗಾಲದಲ್ಲಿ ಅನೇಕ ಮಂದಿ ಕೂದಲು ಉದುರುವಿಕೆ ಮತ್ತು ತಲೆ ಹೊಟ್ಟು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದರೆ ಪ್ರತಿದಿನ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಕೂದಲು ಉದುರುವಿಕೆ ಸಮಸ್ಯೆಯನ್ನು ತಡೆಗಟ್ಟಬಹುದು. ಇದಲ್ಲದೇ, ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ.
ಗ್ರೀನ್ ಟೀ ಆರೋಗ್ಯಕ್ಕೆ ಮಾತ್ರವಲ್ಲದೇ ಕೂದಲಿನ ಬೆಳವಣಿಗೆಗೂ ಒಳ್ಳೆಯದು. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಮೊದಲು ಗ್ರೀನ್ ಟೀಯನ್ನು ಕುದಿಸಿ, ಅದು ತಣ್ಣಗಾಗಲು ಬಿಡಿ. ನಂತರ ಸ್ನಾನ ಮಾಡಿ ಗ್ರೀನ್ ಟೀ ನೀರಿನಿಂದ ಮಸಾಜ್ ಮಾಡಿ. ನಿಮ್ಮ ಕೂದಲನ್ನು ಒಂದು ಗಂಟೆ ಹಾಗೆಯೇ ನೆನೆಯ ಬಿಡಿ. ನಂತರ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಇದು ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿರಿಸುತ್ತದೆ.
ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳಿವೆ. ಇವು ಕೂದಲಲ್ಲಿ ಪ್ರೊಟೀನ್ ನಷ್ಟವಾಗುವುದನ್ನು ತಡೆಯುತ್ತವೆ. ಹೀಗಾಗಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ, ತಲೆಗೆ ಮಸಾಜ್ ಮಾಡಿ ರಾತ್ರಿ ಪೂರ್ತಿ ಬಿಡಿ. ನಂತರ ಬೆಳಗ್ಗೆ ಸ್ನಾನ ಮಾಡಿದರೆ ಕೂದಲಿಗೆ ಉತ್ತಮ ಪೋಷಣೆ ದೊರೆಯುತ್ತದೆ. ಒಣ ಕೂದಲು ಕಡಿಮೆಯಾಗಿ ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ.
ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಮೆಂತ್ಯ ಚೆನ್ನಾಗಿ ಕೆಲಸ ಮಾಡುತ್ತದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಪ್ರೋಟೀನ್, ನಿಕೋಟಿನಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳಿವೆ. ಇವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ.
ರೋಸ್ಮರಿ ಎಣ್ಣೆಯು ತಲೆಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ನೆತ್ತಿಯ ಕೋಶಕಗಳನ್ನು ಸುಧಾರಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ರೋಸ್ಮರಿ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ನೆತ್ತಿಯ ಮೇಲೆ ಮಸಾಜ್ ಮಾಡಿ. ನಂತರ ಅರ್ಧ ಗಂಟೆ ಅಥವಾ ರಾತ್ರಿಯಿಡೀ ಹಾಗೆಯೇ ಬಿಡಿ. ಬಳಿಕ ಬೆಳಗ್ಗೆ ಶಾಂಪೂವಿನಿಂದ ತಲೆ ಕೂದಲನ್ನು ವಾಶ್ ಮಾಡಿ. ನಿಯಮಿತವಾಗಿ ಈ ನಿಯಮವನ್ನು ಅನುಸರಿಸಿದರೆ, ನಿಮ್ಮ ಕೂದಲು ಬೆಳವಣಿಗೆ ಆಗುವುದನ್ನು ನೀವು ಕಾಣುತ್ತೀರಿ.