newsics.com
ಬರ್ಲಿನ್: ಜರ್ಮನಿಯ ಮ್ಯಾಗ್ಡೆಬರ್ಗ್ನ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಪೂರ್ವಕ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಂಕಿತ ದಾಳಿ ನಡೆಸಿದ ಕಾರು ಚಾಲಕ 50 ವರ್ಷ ವಯಸ್ಸಿನ ವೈದ್ಯ, ಮೂಲತಃ ಸೌದಿ ಅರೇಬಿಯಾದವನು ಎನ್ನಲಾಗಿದೆ. ಜರ್ಮನಿಯ ಕಾಯಂ ನಿವಾಸಿ ಕಾರ್ಡ್ ಪಡೆದಿದ್ದ. ಸದ್ಯ ಘಟನೆ ಬಳಿಕ ಈತನನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸದ್ಯಕ್ಕೆ ಆತನೊಬ್ಬನೇ ದಾಳಿಕೋರ ಎಂದು ನಂಬಲಾಗಿದೆ. ನಮಗೆ ತಿಳಿದಂತೆ ಸದ್ಯದಲ್ಲಿ ನಗರಕ್ಕೆ ಬೇರೆ ಯಾವುದೇ ಅಪಾಯ ಇಲ್ಲ ಎಂದು ಸ್ಯಾಕ್ಸೋನಿ-ಅನ್ಹಾಲ್ಟ್ ಗವರ್ನರ್ ರೀನರ್ ಹಸ್ಲೋಫ್ ಸ್ಪಷ್ಟಪಡಿಸಿದ್ದಾರೆ. ಈ ಭಯಾನಕ ದುರಂತದಲ್ಲಿ ಹಲವರು ಸಂತ್ರಸ್ತರಾಗಿದ್ದಾರೆ ಎಂದು ಅವರು ಕಂಬನಿ ಮಿಡಿದಿದ್ದಾರೆ.