newsics.com
ಜನಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ಮಗುವನ್ನು ಹೆರಲು ವಿವಿಧ ರೀತಿಯ ಕಾನೂನು, ಆಫರ್‌ಗಳನ್ನು, ಜಾರಿಗೊಳಿಸಲಾಗುತ್ತಿದೆ. ಆದರೆ ಈ ಒಂದು ದೇಶದಲ್ಲಿ ಮಾತ್ರ ಕಳೆದ ಸುಮಾರು 95 ವರ್ಷಗಳಿಂದ ಒಂದೇ ಒಂದು ಮಗು ಹುಟ್ಟಿಲ್ಲ.
ವಿಶ್ವದ ಅತ್ಯಂತ ಚಿಕ್ಕ ದೇಶವಾದ ವ್ಯಾಟಿಕನ್ ಸಿಟಿಯಲ್ಲಿ ಕಳೆದ 95 ವರ್ಷಗಳಿಂದ ಒಂದೇ ಒಂದು ಮಗು ಜನಿಸಿಲ್ಲ. ಈ ದೇಶದ ಒಟ್ಟು ವಿಸ್ತೀರ್ಣ 0.49 ಚದರ ಕಿಲೋಮೀಟರ್ ಮತ್ತು ಈ ದೇಶದ ಒಟ್ಟು ಜನಸಂಖ್ಯೆ ಕೇವಲ 764 ಆಗಿದೆ.
ಮಗು ಜನಿಸಬಾರದು ಎಂಬುದು ವ್ಯಾಟಿಕನ್ ಸಿಟಿಯ ನಿಯಮ. ಇಲ್ಲಿ ಹೆಚ್ಚಿನ ಪಾದ್ರಿಗಳು ವಾಸಿಸುತ್ತಿರುವುದರಿಂದ ಮದುವೆಯಾಗುವುದನ್ನು ಮತ್ತು ಮಕ್ಕಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ಅದಕ್ಕೂ ಮಿಗಿಲಾಗಿ ಅಲ್ಲಿ ಯಾರಾದರೂ ಗರ್ಭಿಣಿಯಾದರೆ ಹೆರಿಗೆ ಮಾಡಲು ಅಲ್ಲಿ ಆಸ್ಪತ್ರೆಗಳಿಲ್ಲ. ಅಷ್ಟೇ ಅಲ್ಲ, ಯಾರಾದರೂ ಗರ್ಭಿಣಿಯಾದರೆ ಅವರು ವ್ಯಾಟಿಕನ್ ದೇಶ ತೊರೆಯುವುದು ಡ್ಡಾಯ.
ವ್ಯಾಟಿಕನ್ ನಗರವು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ ಪೋಪ್ ಅವರ ನಿವಾಸವಾಗಿದೆ. ಮತ್ತು ಮಗುವಿನ ಜನನದ ಮೇಲೆ ಮಾತ್ರವಲ್ಲ. ವಿವಿಧ ಕಟ್ಟುನಿಟ್ಟಾದ ನಿರ್ಬಂಧಗಳೂ ಇವೆ. ಅದರಲ್ಲೂ ವಿಶೇಷವಾಗಿ ಅಲ್ಲಿ ವಾಸಿಸುವ ಪುರುಷರು ಮತ್ತು ಮಹಿಳೆಯರು ಮಿನಿ ಸ್ಕರ್ಟ್, ಶಾರ್ಟ್ ಸ್ಕರ್ಟ್, ಶಾರ್ಟ್ಸ್ ಮತ್ತು ಸ್ಲೀವ್ ಲೆಸ್ ಬಟ್ಟೆಗಳನ್ನು ಧರಿಸುವಂತಿಲ್ಲ.
ಈ ನಗರದಲ್ಲಿ ವಾಸಿಸುವ ಹೆಚ್ಚಿನ ಮಹಿಳೆಯರ ಗಂಡಂದಿರು ಶಿಕ್ಷಕರಾಗಿ ಮತ್ತು ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಅದರಂತೆ ಇಲ್ಲಿ 50ಕ್ಕಿಂತ ಕಡಿಮೆ ಮಹಿಳೆಯರಿದ್ದಾರೆ. ಅವರೂ ಸಂಪೂರ್ಣವಾಗಿ ಇರುವುದಿಲ್ಲ. ಅವರು ಕೆಲವು ವರ್ಷಗಳವರೆಗೆ ಮಾತ್ರ ಉಳಿಯುತ್ತಾರೆ. ಆ ಅವಧಿಯಲ್ಲಿ ಗರ್ಭಿಣಿಯಾದರೆ ಇಟಲಿಗೆ ಹೋಗಬೇಕು.
ಜನಸಂಖ್ಯೆ ತೀರಾ ಕಡಿಮೆ ಇರುವುದರಿಂದ ಇಲ್ಲಿ ಭದ್ರತಾ ಪಡೆ ಇಲ್ಲ. ಪೋಪ್ ಮತ್ತು ಅವರ ಅರಮನೆಯ ರಕ್ಷಣೆಗಾಗಿ ಸ್ವಿಸ್ ಸೇನೆಯ ಸುಮಾರು 130 ಸೈನಿಕರು ಇಲ್ಲಿದ್ದಾರೆ.
Health tips ರಾತ್ರಿ ನಿದ್ದೆ ಬರುತ್ತಿಲ್ಲವೇ? ಮಲಗುವ 2 ಗಂಟೆ ಮೊದಲು ಈ ಜ್ಯೂಸ್ ಕುಡಿದ್ರೆ ಸಾಕು!