newsics.com
ಭೋಪಾಲ್: ಸರ್ಕಾರಗಳು ಭಿಕ್ಷುಕರೇ ಇಲ್ಲದ ಸಮಾಜ ನಿರ್ಮಿಸಲು ಪ್ರಯತ್ನಿಸುತ್ತಿವೆ. ಆ ನಿಟ್ಟಿನಲ್ಲಿ ಭಾರತದ ಸ್ವಚ್ಛ ನಗರವಾದ ಇಂದೋರ್ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಭಿಕ್ಷಾಟನೆ ಮುಕ್ತ ನಗರವಾಗಿಸಲು ಜನವರಿ 1 ರಿಂದ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ.
ಹೌದು, ಇನ್ಮುಂದೆ ಇಂದೋರ್ನಲ್ಲಿ ಭಿಕ್ಷುಕರಿಗೆ ಹಣ ಹಾಕಿದರೆ, ಹಣ ಕೊಟ್ಟವರ ಮೇಲೆಯೇ ಪೊಲೀಸ್ ಕೇಸ್ ಬೀಳಲಿದೆ. ಜನವರಿ 1 ರಿಂದ ಭಿಕ್ಷುಕರಿಗೆ ಹಣ ನೀಡುವವರ ವಿರುದ್ಧ ಜಿಲ್ಲಾಡಳಿತ ಎಫ್‌ಐಆರ್ ದಾಖಲಿಸಲು ಆರಂಭಿಸಲಿದೆ.
ಇಂದೋರ್‌ನಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ತಿಳಿಸಿದ್ದಾರೆ. ಭಿಕ್ಷಾಟನೆ ವಿರುದ್ಧ ನಮ್ಮ ಜಾಗೃತಿ ಅಭಿಯಾನ ಈ ತಿಂಗಳ ಅಂತ್ಯದವರೆಗೆ ಮುಂದುವರಿಯಲಿದ್ದು, ಜನವರಿ 1ರಿಂದ ಯಾರಾದರೂ ಭಿಕ್ಷೆ ನೀಡುತ್ತಿರುವುದು ಕಂಡು ಬಂದರೆ ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗುವುದು ಎಂದರು. “ಜನರಿಗೆ ಭಿಕ್ಷೆ ನೀಡುವ ಮೂಲಕ ಪಾಪದಲ್ಲಿ ಪಾಲುದಾರರಾಗದಂತೆ ನಾನು ಇಂದೋರ್‌ನ ಎಲ್ಲಾ ನಿವಾಸಿಗಳಿಗೆ ಮನವಿ ಮಾಡುತ್ತೇನೆ” ಎಂದು ಅಧಿಕಾರಿ ಹೇಳಿದ್ದಾರೆ.