newsics.com
ಬೆಂಗಳೂರು: ಗಂಡ ತನಗಿಂತ ಜಾಸ್ತಿ ತಾನು ಸಾಕಿದ ಬೆಕ್ಕನ್ನೇ ಪ್ರೀತಿ ಮಾಡ್ತಾನೆ ಎನ್ನುವ ಕಾರಣ ನೀಡಿ ವರದಕ್ಷಿಣೆ ಕೇಸ್ ಹಾಕಿದ್ದ ಮಹಿಳೆಯ ಮೇಲೆ ಹೈಕೋರ್ಟ್ ಕಿಡಿಕಾರಿದೆ.
ಪತ್ನಿ ಮಾಡಿದ ಆರೋಪವನ್ನು ಗಮನಿಸಿದ ಹೈಕೋರ್ಟ್, ಪತಿಯ ಮೇಲಿನ ಮುಂದಿನ ಎಲ್ಲಾ ರೀತಿಯ ತನಿಖೆಗೆ ತಡೆ ನೀಡಿದೆ.
ದಂಪತಿ ಬೆಂಗಳೂರಿನವರಾಗಿದ್ದು, ತನ್ನ ವಿರುದ್ಧ ಪತ್ನಿ ಸಲ್ಲಿಸಿದ್ದ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಅಡಿಯಲ್ಲಿನ ವಿಚಾರಣೆಯನ್ನು ಪತಿ ಪ್ರಶ್ನೆ ಮಾಡಿದ್ದರು.
ಗಂಡನ ಮನೆಯಲ್ಲಿ ಇರುವ ಸಾಕು ಬೆಕ್ಕಿನ ಜಗಳದ ಮೇಲೆ ಆಧಾರವಾಗಿದೆ. ಗಂಡ ತನಗಿಂತ ಬೆಕ್ಕನ್ನೇ ಹೆಚ್ಚು ಮುದ್ದು ಮಾಡುತ್ತಾನೆ ಅನ್ನೋದೇ ಯುವತಿಯ ಪ್ರಾಥಮಿಕ ಆರೋಪವಾಗಿದೆ. ಇದನ್ನು ಪತ್ನಿ ಬೊಟ್ಟು ಮಾಡಿದಾಗಲೆಲ್ಲ ಇಬ್ಬರ ನಡುವೆ ವಾಗ್ವಾದ ನಡೆದು ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ದೂರಿದ್ದಾಳೆ. ದೂರಿನ ಬಹುತೇಕ ಪ್ಯಾರಾಗಳಲ್ಲಿ ಅದನ್ನೇ ನಿರೂಪಿಸಲಾಗಿದೆ. ಆದ್ದರಿಂದ, ವಿಷಯವು ವರದಕ್ಷಿಣೆ ಬೇಡಿಕೆ ಅಥವಾ ವರದಕ್ಷಿಣೆಯ ಬೇಡಿಕೆಯ ಮೇಲೆ ಹಲ್ಲೆ ಅಥವಾ ಪತಿಯಿಂದ ಕ್ರೌರ್ಯಕ್ಕೆ ಸಂಬಂಧಿಸಿದ್ದಲ್ಲ. ಇದು ಸಾಕು ಬೆಕ್ಕು ಹಾಗೂ ಆ ಬೆಕ್ಕು ಆಕೆಯ ಮೇಲೆ ದಾಳಿ ಮಾಡಿ, ಆಕೆಯನ್ನು ಪರಚಿದ್ದರ ಸಮಸ್ಯೆಯಾಗಿದೆ’ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದರು.
ಅಲ್ಲದೆ, ಯುವತಿ ಮಾಡಿರುವ ದೂರಿನ ದುರುದ್ದೇಶವನ್ನು ಕೂಡ ಕೋರ್ಟ್ ಗಮನಿಸಿದೆ. IPC 498A ಅಡಿಯಲ್ಲಿ ಅಪರಾಧಕ್ಕೆ ಅಗತ್ಯವಾದ ಯಾವುದೇ ಅಂಶಗಳು ಈ ಪ್ರಕರಣದಲ್ಲಿ ದೂರದ ಅರ್ಥದಲ್ಲಿಯೂ ಇರುವುದಿಲ್ಲ ಎಂದು ಹೇಳಿದೆ.
Horrible attack ಹಾರನ್ ಮಾಡಿ ದಾರಿ ಕೇಳಿದ್ದಕ್ಕೆ ಹಲ್ಲೆ: ಕಾರಿನಲ್ಲಿದ್ದ ಚೈತನ್ಯ ಟೆಕ್ನೋ ಕಾಲೇಜಿನ ಡೀನ್ ಸಾವು
Relationship tips ಪ್ರಣಯಕ್ಕೂ ಮುನ್ನ ದಂಪತಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು!
winter season ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರು ಕುಡಿದರೆ ಏನಾಗತ್ತೆ?
ಸೋಡಿಯಂ ಬಳಸಿ ಸ್ಫೋಟ: ಪ್ರತಾಪ್ಗೆ ಬಿಗ್ ಶಾಕ್ ಕೊಟ್ಟ ಕೋರ್ಟ್..drone prathap ಪೊಲೀಸ್ ಕಸ್ಟಡಿಗೆ
ಮಗಳಿಗೆ ಕಿರುಕುಳ ನೀಡಿದವನನ್ನು ಕೊಲ್ಲಲು ಕುವೈತ್ನಿಂದ ಆಂಧ್ರಕ್ಕೆ ಬಂದ ಅಪ್ಪ