newsics.com
ಗ್ವಾಲಿಯರ್: ಪುಷ್ಪ-2 ಚಿತ್ರ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕನೊಬ್ಬನೊಂದಿಗೆ ಥಿಯೇಟರ್ನಲ್ಲಿನ ಕ್ಯಾಂಟೀನ್ ಮಾಲೀಕನೊಬ್ಬ ವಾಗ್ವಾದ ನಡೆಸಿದ್ದು ಆತನ ಕಿವಿಗೆ ಕಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಶಬ್ಬಿರ್ ಎನ್ನುವಾತ ಸಿನಿಮಾ ಮಧ್ಯಂತರದಲ್ಲಿ ತಿಂಡಿ ಖರೀದಿಸಲು ಚಿತ್ರಮಂದಿರದ ಕ್ಯಾಂಟೀನ್ ಬಳಿ ಬಂದಾಗ ಹಣ ಪಾವತಿಯ ವಿಚಾರಕ್ಕೆ ಮಾಲೀಕ ರಾಜುವಿನೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ರಾಜು ಅವರ ಸಹಚರರು ಶಬ್ಬಿರ್ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಗಲಾಟೆ ವೇಳೆ ಶಬ್ಬಿರ್ ಕಿವಿಗೆ ರಾಜು ಕಚ್ಚಿದ್ದಾರೆ ಎನ್ನುವುದಾಗಿ ಎಫ್ಐಆರ್ನಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲು ಮೂವಿಯ ಡ್ರಮಾಟಿಕ್ ಆಕ್ಷನ್ ಸೀಕ್ವೆನ್ಸ್ ನೋಡಿ ಪ್ರೇರೇಪಿತಗೊಂಡು ಈ ಕೃತ್ಯ ಮಾಡಲಾಗಿದೆ ಎನ್ನಲಾಗಿದೆ. ದೃಶ್ಯದಲ್ಲಿ ಅಲ್ಲು ಅರ್ಜುನ್ ತನ್ನ ಶತ್ರುಗಳ ಕಿವಿಯನ್ನು ತನ್ನ ಹಲ್ಲುಗಳಿಂದ ಕಿತ್ತುಹಾಕುತ್ತಾನೆ. ಇದನ್ನು ನೋಡಿಯೇ ಥಿಯೇಟರ್ ಸಿಬ್ಬಂದಿ ಹೀಗೆ ಮಾಡಿದ್ದಾರೆ ಎನ್ನಲಾಗಿದೆ
ಇನ್ನು ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 ದಿ ರೂಲ್ ಬಿಡುಗಡೆಯಾದ ಒಂದು ವಾರಕ್ಕೆ ಸಾವಿರ ಕೋಟಿ ಗಳಿಕೆ ಮಾಡಿದೆ ಎಂದು ಸಿನಿಮಾ ನಿರ್ಮಾಪಕರು ಹೇಳಿದ್ದಾರೆ.