newsics.com
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಮುಂದಿನ 24 ಗಂಟೆಗಳ ಅವಧಿಯಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗುರುವಾರ ಮೋಡ ಕವಿದ ವಾತಾವರಣವಿರಲಿದ್ದು, ಆಗಾಗ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ತಮಿಳುನಾಡು- ಶ್ರೀಲಂಕಾ ಮಧ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಮಿಳುನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬುಧವಾರ ಮೋಡ ಕವಿದ ವಾತಾವರಣವಿತ್ತು.
ಗುರುವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ಆಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಶುಕ್ರವಾರ ಹಾಸನ, ಕೊಡಗು, ಚಾಮರಾಜನಗರ, ಮಂಡ್ಯ, ಮೈಸೂರು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಡಿಸೆಂಬರ್ 16ರ ವೇಳೆಗೆ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದರ ತೀವ್ರತೆ ಹೆಚ್ಚಿದಲ್ಲಿ ಡಿಸೆಂಬರ್ 17, 18 ರಂದು ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಮಳೆಯಾಗುವ ಸಂಭವವಿದೆ.
Love and hate ಕಳೆದ ವರ್ಷ ಅತ್ಯಾ*ಚಾರ, ಈಗ ಜಾಮೀನಿನ ಮೇಲೆ ಹೊರಬಂದು ಆಕೆಯನ್ನು ಕೊಂ*ದೇಬಿಟ್ಟ!
Bore well tragedy ಕೊನೆಗೂ ಬದುಕಿ ಬರಲಿಲ್ಲ ಬಾಲಕ ಆರ್ಯನ್, 57 ಗಂಟೆಗಳ ಕಾರ್ಯಾಚರಣೆ ವಿಫಲ
ಭಿಕ್ಷೆ ಬೇಡಿಯೇ ಏಳೂವರೆ ಕೋಟಿ ನಗದು, ಒಂದೂವರೆ ಕೋಟಿ ಆಸ್ತಿ ಗಳಿಸಿದ ಈತ ವಿಶ್ವದ ಅತಿ ಶ್ರೀಮಂತ ಭಿಕ್ಷುಕ!
Supreme Court ಗಂಡ, ಅತ್ತೆ- ಮಾವಂದಿರಿಗೆ ಕಿರುಕುಳ: ವಿವಾಹಿತೆಯರಿಂದ ಕಾನೂನು ದುರ್ಬಳಕೆ- ಸುಪ್ರೀಂ ಕಳವಳ
Basava Jayamruthunjaya swamiji ಡಿ. 12ಕ್ಕೆ ರಾಜ್ಯಾದ್ಯಂತ ರಸ್ತೆ ತಡೆ ಹೋರಾಟಕ್ಕೆ ಕರೆ ನೀಡಿದ ಪಂಚಮಸಾಲಿ ಶ್ರೀ