Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Heart attack 26 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಹೃದಯಾಘಾತದಿಂದ ಸಾವು, ಯಾಕೆ ಹೀಗಾಯ್ತು?
ಕರ್ನಾಟಕಪ್ರಮುಖ

Heart attack 26 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಹೃದಯಾಘಾತದಿಂದ ಸಾವು, ಯಾಕೆ ಹೀಗಾಯ್ತು?

Share
1 Min Read
SHARE

newsics.com

ಹಾಸನ: ವರ್ಕ್ ಫ್ರಂ‌ ಹೋಮ್(WH)‌ನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಇಂಜಿನಿಯರ್‌ನನ್ನು ಸಮರ್ಥ್ (26) ಎಂದು ಗುರುತಿಸಲಾಗಿದೆ. ಗ್ರಾಮದ ಕಾಫಿ ಬೆಳೆಗಾರರಾದ ಹೇಮಂತ್ ಹಾಗೂ ಸರಳ ಎಂಬುವರ ಪುತ್ರ ಸಮರ್ಥ್ ಚಿಕ್ಕಂದಿನಿಂದಲೂ ಉತ್ತಮ ಅಂಕ ಗಳಿಸುತ್ತಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಓದು ಮುಗಿದ ನಂತರ ಸಮರ್ಥ್ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು.

ಮದುವೆ ವಯಸ್ಸಿಗೆ ಬಂದಿದ್ದ ಮಗನಿಗೆ ರಾತ್ರಿ ಪಾಳಿಯ ಕೆಲಸ ಇದ್ದುದರಿಂದ ನೀನು ಮನೆಗೆ ಬಂದು ಇಲ್ಲಿಂದಲೇ ಕೆಲಸ ಮಾಡಬಹುದಾ ಎಂದು ಮನೆಯಲ್ಲಿ ತಂದೆ ತಾಯಿ ಕೇಳಿದ್ದಾರೆ. ಈ ಬಗ್ಗೆ ಕಚೇರಿಯಲ್ಲಿ ವರ್ಕ್‌ ಫ್ರಂ ಹೋಮ್ ಕೇಳಿಕೊಂದು ಕೆಲವು ದಿನಗಳ ಹಿಂದೆ ಮನೆಗೆ ಹೋಗಿದ್ದಾರೆ. ಕಳೆದ ಕೆಲವು ತಿಂಗಳಿಂದ ಮನೆಯಲ್ಲಿ ರಾತ್ರಿಯಿಂದ ಬೆಳಗಾಗುವವರೆಗೂ ಕೆಲಸ ಮಾಡುತ್ತಿದ್ದ ಸಮರ್ಥ್ ಬೆಳಗಿನ ಜಾವ ಎಲ್ಲರೂ ಎದ್ದು ದೈನಿಕ ಕೆಲಸ ಶುರು ಮಾಡುವ ವೇಳೆಗೆ ಮಲಗುತ್ತಿದ್ದರು. ನಂತರ, ಸಂಜೆ ವೇಳೆ ಎದ್ದು ಒಂದಷ್ಟು ದಿನಚರಿ ಮುಗಿಸಿದ ನಂತರ ಪುನಃ ಕೆಲಸ ಆರಂಭಿಸುತ್ತಿದ್ದರು.

ಶನಿವಾರ ರಾತ್ರಿಯ ಕೆಲಸ ಮುಗಿಸಿದ ಸಮರ್ಥ್ ಎಂದಿನಂತೆ ಬೆಳಗ್ಗೆ ತಿಂಡಿ ತಿಂದು ಮಲಗಿ ಸಂಜೆ ಎದ್ದಿದ್ದಾನೆ. ಸಂಜೆ ಹಾಸಿಗೆಯಿಂದ ಎದ್ದು ನೀರು ಕುಡಿದಿದ್ದಾನೆ. ತಕ್ಷಣವೇ ತಾನಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ನಿದ್ದೆ ಇಲ್ಲದೇ ಅಸ್ವಸ್ಥಗೊಂಡಿರಬಹುದು ಎಂದು ಮನೆಯವರು ಕೂಡಲೇ ಆಸ್ಪತ್ರೆಗೆ ಕರೆ ಮಾಡಿ ವೈದ್ಯರನ್ನು ಮನೆಗೆ ಕರೆಸಿಕೊಂಡಿದ್ದಾರೆ. ವೈದ್ಯರು ಬಂದು ತಪಾಸಣೆ ಮಾಡಿದಾಗ ಸಮರ್ಥ ಕೊನೆಯುಸಿರೆಳೆದಿದ್ದರು.

ನಿಮ್ಮ ಮೊಬೈಲ್‌ನಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲವೇ..? ಈ ರೀತಿ ಮಾಡಿ

Relationship Tips: ಜೀವನ ಪರ್ಯಂತ ಮೊದಲ ರಾತ್ರಿ ನೆನಪಿನಲ್ಲಿ ಉಳಿಯಬೇಕಾ? ಈ ಕೆಲಸಗಳನ್ನ ಮಾಡಿ

Crime ಪತ್ನಿ ಕೇಸ್ ಹಾಕಿದ್ದಕ್ಕೆ ಬೆಂಗಳೂರಿನಲ್ಲಿ ಪತಿ ಆತ್ಮಹತ್ಯೆ

TAGGED:26-year-old software engineer dies of heart attack
Share This Article
Facebook Twitter Copy Link Print
Previous Article Relationship Tips: ಜೀವನ ಪರ್ಯಂತ ಮೊದಲ ರಾತ್ರಿ ನೆನಪಿನಲ್ಲಿ ಉಳಿಯಬೇಕಾ? ಈ ಕೆಲಸಗಳನ್ನ ಮಾಡಿ
Next Article Choreographer Jani Master ನೃತ್ಯಗಾರರ ಸಂಘದಿಂದ ಶಾಶ್ವತವಾಗಿ ಹೊರಕ್ಕೆ ಉಳಿದ ಜಾನಿ ಮಾಸ್ಟರ್

Popular Posts

Life imprisonment 17 ಮಂದಿಗೆ ಜೀವಾವಧಿ ಶಿಕ್ಷೆ, 4.25 ಲಕ್ಷ ದಂಡ: ಮಹತ್ವದ ತೀರ್ಪು ಪ್ರಕಟಿಸಿದ ಜಿಲ್ಲಾ ಕೋರ್ಟ್

1 Min Read

Bangalore Dog Operation ಬೆಂಗಳೂರು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಸ್ಸಾಂನಿಂದ ಶ್ವಾನ ಹಿಡಿಯುವ ಸಿಬ್ಬಂದಿ

2 Min Read

India’s first medal ಕಾಮನ್‌ವೆಲ್ತ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ; ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಜಂಡು ಕುಮಾರ್‌ಗೆ ಕಂಚಿನ ಶುಭಾರಂಭ

2 Min Read

Chaturmasya ಚಾತುರ್ಮಾಸ್ಯದಿಂದ ಅಧ್ಯಾತ್ಮ ಮತ್ತು ಆರೋಗ್ಯ ಲಾಭಗಳು

1 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಬ್ರಹ್ಮ ಯೋಗ, ಇಂದ್ರ ಯೋಗ: ಹೆಚ್ಚಲಿದೆ ಈ ರಾಶಿಗಳ ಧನಸಂಪತ್ತು

4 Min Read
ಕರ್ನಾಟಕಪ್ರಮುಖ

Shortage of human cadavers ಸರ್ಕಾರಿ ವೈದ್ಯ ಕಾಲೇಜುಗಳಿಗೆ ಸಿಗುತ್ತಿಲ್ಲ ಮನುಷ್ಯ ಮೃತದೇಹ! ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಂಟಕ

2 Min Read
ದೇಶಪ್ರಮುಖ

Modi selfie video viral ಡಿಜಿಟಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದ ಮೋದಿ ಸೆಲ್ಫಿ ವಿಡಿಯೋ: ಒಂದೇ ರಾತ್ರಿಯಲ್ಲಿ 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆ!

2 Min Read
ದೇಶಪ್ರಮುಖ

NEET – NTAಗೆ ಮೇಜರ್ ಸರ್ಜರಿ: 47 ಅಧಿಕಾರಿಗಳ‌ ವಜಾ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?