newsics.com
ಹಾಸನ: ಕಾಂಗ್ರೆಸ್ ಸಮಾವೇಶದ ವೇದಿಕೆಯಲ್ಲಿ ಹಾಕಲಾಗಿದ್ದ ಕೇಬಲ್ ಸಿಲುಕಿ ಸಿಎಂ ಸಿದ್ದರಾಮಯ್ಯ ಮುಗ್ಗರಿಸಿದ ಘಟನೆ ಗುರುವಾರ ನಡೆಸಿದೆ.
ವೇದಿಕೆ ಮೇಲೆ ಬಂದು ಅಭಿಮಾನಿಗಳತ್ತ ಕೈ ಬೀಸುವಾಗ ಸಿದ್ದರಾಮಯ್ಯ ಕಾಲಿಗೆ ಕೇಬಲ್ ಸಿಲುಕಿ ಮುಗ್ಗರಿಸಿದ್ದಾರೆ. ತಕ್ಷಣ ಅಲ್ಲಿದ್ದವರು ಅವರನ್ನು ಹಿಡಿದುಕೊಂಡಿದ್ದಾರೆ.
ಅರಸೀಕೆರೆ ರಸ್ತೆಯ ಎಸ್. ಎಂ. ಕೃಷ್ಣ ನಗರದಲ್ಲಿ ಸಮಾವೇಶ ನಡೆಯುತ್ತಿದ್ದು, ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶಿಸುತ್ತಿದೆ. ಹಾಸನದಲ್ಲಿ ಗುರುವಾರ ಆಯೋಜಿಸಲಾಗಿರುವ ಜನಕಲ್ಯಾಣ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಸರ್ಕಾರದ ಹಲವು ಸಚಿವರು, ಶಾಸಕರು ಪಾಲ್ಗೊಂಡಿದ್ದಾರೆ. ಸಮಾವೇಶದ ಹಿನ್ನೆಲೆಯಲ್ಲಿ ನಗರದ ಎಲ್ಲಾ ಕಡೆ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ಸಿಎಂ ಅಭಿಮಾನಿಗಳು ಸಿದ್ದರಾಮಯ್ಯರ ಫೋಟೋ ಹಿಡಿದು ಕುಣಿದು ಕುಪ್ಪಳಿಸುತ್ತಿದ್ದಾರೆ.
ಇನ್ನು, ಗೃಹ ಸಚಿವ ಡಾ.ಪರಮೇಶ್ವರ್ ಅವರು, ಸಿಎಂ ಹುದ್ದೆ ವಿಚಾರದಲ್ಲಿ ಒಪ್ಪಂದವಾಗಿದೆ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅವರವರೇ ಸಿಎಂ ಹುದ್ದೆ ಹಂಚಿಕೊಳ್ಳುವುದಾದರೆ ನಾವುಗಳೆಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಡಿಕೆಶಿಯವರ ಒಪ್ಪಂದ ಕುರಿತ ಹೇಳಿಕೆಯನ್ನು ತಳ್ಳಿಹಾಕಿದ್ದು, ಅಂತಹ ಯಾವುದೇ ಒಪ್ಪಂದ ನಡೆದಿಲ್ಲ. ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
Double murder: ಪ್ರೀತಿಗೆ ಅಡ್ಡಿ – ತಲೆ ಕೊಚ್ಚಿ ಮೆದುಳು ಹೊರತೆಗೆದ ಯುವಕ
High Court Notice ಮುಡಾ ಪ್ರಕರಣ: ರಾಜ್ಯಪಾಲ, ಸಿಬಿಐಗೆ ಹೈಕೋರ್ಟ್ ನೋಟಿಸ್, ಜ.25ಕ್ಕೆ ವಿಚಾರಣೆ ಮುಂದೂಡಿಕೆ