newsics.com
ಬೆಂಗಳೂರು : ಸ್ಯಾಂಡಲ್‌ವುಡ್ ನಟಿ ನಿರ್ದೇಶಕಿ ರೂಪಾ ಅಯ್ಯರ್ ಇದೀಗ ತಮ್ಮ 42ನೇ ವಯಸ್ಸಿನಲ್ಲಿ ಬಹುದೊಡ್ಡ ನಿರ್ಧಾರಕ್ಕೆ ಮುಂದಾಗಿದ್ದಾರೆ.
2014ರಲ್ಲಿ ಸಂಬಂಧಿಕರ ಮನೆಯ ಹುಡುಗನಾಗಿದ್ದ ಗೌತಮ್ ಶ್ರೀನಿವಾಸ್ ಅವರನ್ನು ರೂಪಾ ಮನೆಯವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ನಿರ್ಧಾರವನ್ನು ಮುಂದೂಡಿದ್ದ ಈ ದಂಪತಿ, ಇದೀಗ ಹೊಸ ಪುಟ ತೆರೆಯುತ್ತಿದ್ದಾರೆ. ಅದೂ ಬಾಡಿಗೆ ತಾಯ್ತನದ ಮೂಲಕ.
ರೂಪಾ ಅಯ್ಯರ್ ಬಾಡಿಗೆ ತಾಯ್ತನದ ಮೂಲಕ ನಾಲ್ಕು ಮಕ್ಕಳನ್ನು ಪಡೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿರುವ ಅವರು, “ನಾನೀಗ ಸರೋಗಸಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ನಮ್ಮ ಅಮ್ಮನೇ ಏನೂ ಇಲ್ಲದಿದ್ದಾಗ ಮೂರು ಮಕ್ಕಳನ್ನು ಬೆಳೆಸಿದ್ದಾರೆ. ನಾನೀಗ ನಾಲ್ಕು ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದುಕೊಳ್ಳಲು ಪ್ಲಾನ್ ನಡೆಯುತ್ತಿದೆ. ಈಗಾಗಲೇ ಡಾಕ್ಟರ್ ಜತೆಗೂ ಮಾತುಕತೆ ನಡೆದಿದೆ” ಎಂದಿದ್ದಾರೆ.
ಮದುವೆ ಆದ ಮೇಲೆ ಮಕ್ಕಳನ್ನು ಮಾಡಿಕೊಳ್ಳಬೇಕು ಅಂತ ಅಂದುಕೊಂಡ್ವಿ. ಅವರ ಮನೆಯಲ್ಲಿ ನಿಧಾನಕ್ಕೆ ಮಾಡಿಕೊಳ್ಳುವ ಬಗ್ಗೆ ಡಿಸಿಷನ್ ತೆಗೊಂಡಿದ್ರು. ಅದಾದ ಮೇಲೆ ಇದೀಗ ನಾವೆಲ್ಲ ಸೇರಿಕೊಂಡು, ನಮ್ಮ ಅತ್ತೆ ಮನೆಯಲ್ಲಿಯೂ ಈ ಬಗ್ಗೆ ಮಾತನಾಡಿಕೊಂಡು ಸರೋಗಸಿ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದೇವೆ. ನಮ್ಮ ಅಮ್ಮ ಏನೂ ಇಲ್ಲದೆ ನಾವು ಮೂರು ಮಕ್ಕಳನ್ನು ಸಾಕಿದ್ದಾರೆ. ಈಗ ನಮ್ಮ ಬಳಿ ಎಲ್ಲವೂ ಇದೆ, ಹಾಗಾಗಿ ನಾವು ನಾಲ್ಕು ಮಕ್ಕಳನ್ನು ಪಡೆಯುವ ನಿರ್ಧಾರ ಮಾಡಿದ್ದೇವೆ” ಎಂದಿದ್ದಾರೆ ರೂಪಾ ಅಯ್ಯರ್.