newsics.com
ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆಯ ಸೊಬಗು ಕಳೆಗಟ್ಟಿದೆ. ಪರಿಷೆಗೆ ಅಧಿಕೃತವಾಗಿ ಚಾಲನೆ ಸಿಗುವ ಎರಡು ದಿನದ ಮೊದಲೇ ಬಸವನಗುಡಿಯಲ್ಲಿ ಜಾತ್ರೆ ವಾತಾವರಣ ಸೃಷ್ಟಿಯಾಗಿದೆ.
ಕಾರ್ತೀಕ ಮಾಸದ ಕೊನೆ ಸೋಮವಾರ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಬಸವನಿಗೆ ಕಡಲೆಕಾಯಿ ಹಾಗೂ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ನವೆಂಬರ್ 25ರಂದು ಬೆಳಿಗ್ಗೆ ಕಡಲೆಕಾಯಿ ಪರಿಷೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ಬಸವನಗುಡಿ ರಸ್ತೆಯಲ್ಲಿ ನವೆಂಬರ್ 21ರಿಂದಲೇ ಕಡಲೆಕಾಯಿ ರಾಶಿ ಕಂಡು ಬಂತು. ಶುಕ್ರವಾರ ಅದರ ಪ್ರಮಾಣ ಹೆಚ್ಚಾಯಿತು. ಇನ್ನು ಕನಕಪುರ, ದೊಡ್ಡಬಳ್ಳಾಪುರ, ರಾಮನಗರ, ಮಾಗಡಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮೈಸೂರು, ಮಂಡ್ಯ, ತುಮಕೂರು ಕಡೆಗಳಿಂದ ಕಡಲೆಕಾಯಿಯನ್ನು ವ್ಯಾಪಾರಿಗಳು ಇಲ್ಲಿಗೆ ತಂದಿದ್ದಾರೆ.
ಬಸನಗುಡಿ ರಸ್ತೆ ಕಡಲೆಕಾಯಿ ವ್ಯಾಪಾರಕ್ಕೆ ಸೀಮಿತವಾಗಿಲ್ಲ. ಮಕ್ಕಳ ಆಟಿಕೆಗಳು, ಆಲಂಕಾರಿಕ ವಸ್ತುಗಳು, ಹಲವು ರೀತಿಯ ತಿನಿಸುಗಳ ಮಾರಾಟವೂ ಹೆಚ್ಚಾಗಿದೆ.