newsics.com
ಅನಂತಪುರ: ಬಸ್ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಡಿ.ನಾಗಮ್ಮ, ರಾಮಾಂಜಿನಮ್ಮ, ಬಾಲಪೆದ್ದಯ್ಯ, ಬಿ.ನಾಗಮ್ಮ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ಒಟ್ಟು 13 ಜನರು ಆಟೋದಲ್ಲಿ ತೆರಳುತ್ತಿದ್ದರು. ಎಲ್ಲರೂ ಪುಟ್ಲೂರು ಮಂಡಲದ ಎಲ್ಲುಟ್ಲ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ.
ತಿಮ್ಮಂಪೇಟ ಸಮೀಪ ಬಾಳೆ ತೋಟದಲ್ಲಿ ದಿನಗೂಲಿ ಕೆಲಸ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಅನಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.