newsics.com
ಬೆಂಗಳೂರು: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ರಜತ್ ಕಿಶನ್, ಆಡಿದ ಕೆಲವು ಅವಾಚ್ಯ ಪದಗಳಿಂದ ಹೃದಯದಿಂದ ದೂರ ಉಳಿದಿದ್ದಾರೆ.
ಒಂದೆಡೆ ಮನೆಯ ಸದಸ್ಯರೆಲ್ಲರೂ ರಜತ್ ಆಟದ ವೈಖರಿಯನ್ನು ಮೆಚ್ಚಿಕೊಂಡರೆ, ಆಡಿದ ಪದಗಳನ್ನು ಒಪ್ಪದೆ, ಕಳಪೆ ಪಟ್ಟವನ್ನು ಕೊಟ್ಟು ಜೈಲಿಗೆ ಕಳಿಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ರಜತ್, ಮತ್ತಷ್ಟು ಅಸಮಾಧಾನದ ಮಾತುಗಳನ್ನು ಆಡುವ ಮೂಲಕ ಕೆಲವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಸದ್ಯ ಈ ವಿಷಯವನ್ನು ಇಂದಿನ ‘ವಾರದ ಕಥೆ ಕಿಚ್ಚನ ಜತೆ’ ಸಂಚಿಕೆಯಲ್ಲಿ ಮುನ್ನೆಲೆಗೆ ತಂದಿರುವ ಕಿಚ್ಚ ಸುದೀಪ್, ಎಂದಿನಂತೆ ತಮ್ಮ ಖಡಕ್ ಶೈಲಿಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ
https://www.instagram.com/reel/DCtLpYDtaCS/?igsh=bXhlYXY2cDNnandr
‘ಒಬ್ಬ ಮನುಷ್ಯನ ಬಾಯಿಂದ ಹೊರಬರುವ ಮಾತು, ಕೇವಲ ಮಾತಲ್ಲ. ಅದು ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟಕ್ಕೂ ಏರಿಸುತ್ತೆ, ಸೋಲಿನ ದಾರಿನ ಹಿಡಿಸುತ್ತೆ’ ಎಂದು ಸುದೀಪ್ ಇಂದಿನ ಶನಿವಾರದ ಸಂಚಿಕೆಯ ಪ್ರಾರಂಭದಲ್ಲಿಯೇ ಹೇಳಿದ್ದಾರೆ. ಈ ಕುರಿತು ಒಂದು ಸಣ್ಣ ಪ್ರೋಮೋ ಹೊರಬಿದ್ದಿದ್ದು, ವೀಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿದೆ.