newsics.com
ಮುಂಬೈ : ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಬೇರೆಯಾಗಲು ಕಾರಣವೇನು? ಬಾಲಿವುಡ್ ಸೆಲೆಬ್ರೆಟಿಗಳ ಡಿವೋರ್ಸ್ ಪ್ರಕರಣದಲ್ಲಿ ಬರವು ಸಾಮಾನ್ಯ ಅಂಶಗಳನ್ನು ವಕೀಲೆ ಪಟ್ಟಿ ಮಾಡಿದ್ದಾರೆ.
ವಂದನಾ ಶಾ ಹಲವು ಬಾಲಿವುಡ್ ಸೆಲೆಬ್ರೆಟಿಗಳ ಡಿವೋರ್ಸ್ ಕೇಸ್ ಹತ್ತಿರದಿಂದ ನೋಡಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಕಂಡು ಬರುವ ಸಾಮಾನ್ಯಗಳನ್ನು ಪಟ್ಟಿ ಮಾಡಿದ್ದಾರೆ.
ದಾಂಪತ್ಯದಲ್ಲಿ ಬೇಸರ. ದಾಂಪತ್ಯ ಸೊರಗುತ್ತಿರುವಂತೆ ಸೆಲೆಬ್ರಟಿಗಳು ಒಂದು ವಿವಾಹದಿಂದ ಇನ್ನೊಂದಕ್ಕೆ ಹೋಗುತ್ತಾರೆ, ಬಾಲಿವುಡ್‌ನ ಶ್ರೀಮಂತ ಕುಟುಂಬಗಳಲ್ಲೂ ಇದು ಸಂಭವಿಸುತ್ತದೆ ಎಂದು ವಂದನಾ ಹೇಳಿದ್ದಾರೆ. ಎರಡನೆಯದಾಗಿ, ಅವರು ತುಂಬಾ ವಿಭಿನ್ನವಾದ ಲೈಂಗಿಕ ಜೀವನ ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಸಾಮಾನ್ಯ ವ್ಯಕ್ತಿಗಿಂತ ಸೆಲೆಬ್ರೆಟಿಗಳ ಲೈಂಗಿಕ ಜೀವನದ ನಿರೀಕ್ಷೆಗಳು ತುಂಬಾ ಹೆಚ್ಚು. ಮೂರನೆಯದಾಗಿ, ವ್ಯಭಿಚಾರ ಸಂಭವಿಸುತ್ತದೆ, ಒನ್ ನೈಟ್ ಸ್ಟ್ಯಾಂಡ್ ಸಮಸ್ಯೆಯಲ್ಲ ಎಂದಿದ್ದಾರೆ
ನಾನು ಬಾಲಿವುಡ್‌ನ ಭಾಗವಲ್ಲ, ನನಗೆ ಬಂದ ಪ್ರಕರಣಗಳಿಂದ ಮಾತ್ರ ನಾನು ಹೇಳುತ್ತಿದ್ದೇನೆ. ಬೇಸರ, ಸಾಕಷ್ಟು ಪ್ರಾಮುಖ್ಯತೆ ನೀಡದಿರುವುದು, ಅಥವಾ ದಂಪತಿಗಳು ಹೊರಗಿನವರ ಮಾತುಗಳನ್ನು ಹೆಚ್ಚು ಕೇಳುವುದು ಮುಖ್ಯ ಸಮಸ್ಯೆಗಳು. ಆ ಹೊರಗಿನವರು ತಾಯಿ, ಸಹೋದರ ಅಥವಾ ಮಾವನೂ ಆಗಿರಬಹುದು” ಎಂದು ವಂದನಾ ಹೇಳಿದ್ದಾರೆ.