newsics.com
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಲ್ ಬಸ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಮನೆಯೊಂದಕ್ಕೆ ನುಗ್ಗಿದೆ.
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಧುರಾ ಶಿಕ್ಷಣ ಸಂಸ್ಥೆಯ ಶಾಲಾ ಬಸ್ ಅಮಿನಡ್ಕ ಬಳಿ ಪೆರ್ಲಂಪಾಡಿ ಕಡೆಗೆ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಚಾಲಕ ಯಾವುದೇ ಸಿಗ್ನಲ್ ಹಾಕಿರಲಿಲ್ಲ ಎನ್ನಲಾಗಿದೆ. ದಿಢೀರ್ ಆಗಿ ಸ್ಕೂಲ್ ಬಸ್ ತಿರುವು ಪಡೆದುಕೊಂಡ ಪರಿಣಾಮ ಖಾಸಗಿ ಬಸ್, ಸ್ಕೂಲ್ ಬಸ್ಗೆ ಢಿಕ್ಕಿ ಹೊಡೆಯುವ ಸಾಧ್ಯತೆ ಇತ್ತು.
ತತ್ಕ್ಷಣ ಖಾಸಗಿ ಬಸ್ ಚಾಲಕ ಬಸ್ ಅನ್ನು ಇನ್ನೊಂದು ಬದಿಗೆ ತಿರುಗಿಸಿದ್ದು, ಈ ವೇಳೆ ಮನೆಯೊಂದಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.