newsics.com
ದೆಹಲಿ: ಜೆಸಿಬಿಗಳ ಮೂಲಕ 20 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ನವದಂಪತಿಗಳ ಮೇಲೆ ಸುರಿದ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ಸದ್ಯ ಈ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮದುವೆಯಲ್ಲಿ ಹೂವಿನ ಸ್ವಾಗತ ಮಾಡಿದರೆ, ಈ ಮದುವೆಯಲ್ಲಿ ಕಂತು ಕಂತು ಹಣಗಳನ್ನು ಎಸೆದು ನವ ದಂಪತಿಗಳನ್ನು ಸ್ವಾಗತಿಸಲಾಗಿದೆ. ಸುಮಾರು 20ಲಕ್ಷಕ್ಕೂ ಅಧಿಕ ಹಣದ ಸರಿಮಳೆಯನ್ನು ಸುರಿಸಲಾಗಿದೆ. ಹೌದು, ವರನ ಕಡೆಯಿಂದ ಬಂದ ಅತಿಥಿಗಳು ಮದುವೆಯ ಮೆರವಣಿಗೆಯಲ್ಲಿ 100, 200 ಹಾಗೂ 500 ರೂಪಾಯಿ ನೋಟಿನ ಕಂತೆಯನ್ನು ಎಸೆದಿದ್ದಾರೆ. ಜೆಸಿಬಿಯಲ್ಲಿ ನಿಂತು, ಮನೆಯ ಟೆರೇಸ್ ಮೇಲೆ ಹತ್ತಿ ತಮ್ಮಿಷ್ಟದಂತೆ ಎಲ್ಲ ಕಡೆ ನೋಟುಗಳನ್ನು ಎಸೆದಿದ್ದಾರೆ. ಒಟ್ಟು 20 ಲಕ್ಷ ರೂಪಾಯಿಯನ್ನು ಈ ರೀತಿಯಾಗಿ ಎಸೆದಿದ್ದಾರೆ ಎಂದು ವರದಿಯಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ಘಟನೆಯ ದಿನಾಂಕ ಮಾತ್ರ ತಿಳಿದುಬಂದಿಲ್ಲ. ಅದಲ್ಲದೆ ಈ ನೋಟುಗಳು, ಅಸಲಿಯೋ, ನಕಲಿಯೋ ಎನ್ನುವುದು ತಿಳಿದುಬಂದಿಲ್ಲ.