newsics.com
ಬಾಗಲಕೋಟೆ : ಆನ್ ಲೈನ್’ನಲ್ಲಿ ಮನೆಗೆ ಬಂದ ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಮಹಿಳೆಗೆ ಗಂಭೀರ ಗಾಯಗಳಾದ ಘಟನೆ ಬಾಗಲಕೋಟೆಯ ಇಳಕಲ್ ನಲ್ಲಿ ನಡೆದಿದೆ.
ಬಸಮ್ಮ ಯರನಾಳ ಎಂಬ ಮಹಿಳೆಯ ಕೈಗಳು ಛಿದ್ರ ಛಿದ್ರವಾಗಿದೆ. ಶಶಿಕಲಾ ಎಂಬುವರ ಮನೆಗೆ ಹೇರ್ ಡ್ರೈಯರ್ ಕೊರಿಯರ್ ಮೂಲಕ ಬಂದಿತ್ತು.
ಪಾರ್ಸಲ್ ತೆಗೆದುಕೊಂಡು ಸುಮ್ಮನೆ ಇದ್ದರೆ ಯಾವುದೇ ಅವಘಡ ನಡೆಯುತ್ತಿರಲಿಲ್ಲ. ಪಾರ್ಸಲ್ ರಿಸೀವ್ ಮಾಡಿದ ಬಸಮ್ಮ ಏನು ಇದೆ ನೋಡೋಣ ಅಂತ ಓಪನ್ ಮಾಡಿದ್ದಾರೆ. ನಂತರ ಬಸಮ್ಮ ಅವರು ಹೇರ್ ಡ್ರೈಯರ್ ಸ್ವಿಚ್ ಹಾಕಿ ಆನ್ ಮಾಡಿದಾಗ ಅದು ಸ್ಫೋಟಗೊಂಡಿದೆ. ಹೇರ್ ಡ್ರೈಯರ್ ಸ್ಫೋಟದಿಂದ ಬಸಮ್ಮ ಅವರ ಹಸ್ತಗಳು ಛಿದ್ರಗೊಂಡಿದೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ . ಈ ಸಂಬಂಧ ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.