newsics.com
ಮುಂಬೈ: ಮಹಾರಾಷ್ಟ್ರ ಚುನಾವಣಾ ಕಣ ರಂಗೇರುತ್ತಿದ್ದು, ದ್ವೇಷದ ಘಟನೆಗಳೂ ನಡೆಯುತ್ತಿವೆ. ಎನ್ಸಿಪಿ-ಎಸ್ಸಿಪಿ ನಾಯಕ ಅನಿಲ್ ದೇಶ್ಮುಖ್ ಅವರ ಕಾರಿನ ಮೇಲೆ ಕೆಲ ದುಷ್ಕರ್ಮಿಗಳು ಸೋಮವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದು, ದೇಶ್ಮುಖ್ ತಲೆಗೆ ಗಂಭೀರವಾಗಿ ಗಾಯವಾಗಿದೆ.
ದೇಶ್ಮುಖ್ ಅವರು ಸೋಮವಾರ ರಾತ್ರಿಯವರೆಗೂ ಪ್ರಚಾರದಲ್ಲಿ ತೊಡಗಿದ್ದು, ನಾಗುರ ಜಿಲ್ಲೆಯ ನಾರ್ಖೇಡ್ ಗ್ರಾಮದಲ್ಲಿ ನಡೆದ ಸಭೆ ಮುಗಿಸಿ ಕಟೋಲ್ಗೆ ಹಿಂತಿರುಗುತ್ತಿದ್ದಾಗ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಕಟೋಲ್ ವಿಧಾನಸಭಾ ಕ್ಷೇತ್ರದ ಕಟೋಲ್ ಜಲಖೇಡ ರಸ್ತೆಯಲ್ಲಿ ಕೆಲ ದುಷ್ಕರ್ಮಿಗಳು ತಮ್ಮ ಕಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅನಿಲ್ ದೇಶ್ಮುಖ್ ಅವರೇ ಸ್ವತಃ ಹೇಳಿದ್ದಾರೆ. ದೇಶ್ಮುಖ್ ಅವರ ತಲೆಗೆ ಪಟ್ಟಾದ್ದರಿಂದ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಲಗಾರರಿಗೆ ಸಿಹಿ ಸುದ್ದಿ: ಬ್ಯಾಂಕ್ ಬಡ್ಡಿ ದರ ಇಳಿಕೆಗೆ ಕೇಂದ್ರ ಸೂಚನೆ
ಉಡುಪಿಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆ; ಯಾರು ಈ ವಿಕ್ರಂ ಗೌಡ?