Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಎಲಾನ್ ಮಸ್ಕ್ ಕಂಪನಿಯಿಂದ ಇಸ್ರೋ ರಾಕೆಟ್ ಉಡಾವಣೆ
Uncategorized

ಎಲಾನ್ ಮಸ್ಕ್ ಕಂಪನಿಯಿಂದ ಇಸ್ರೋ ರಾಕೆಟ್ ಉಡಾವಣೆ

Share
1 Min Read
SHARE

newsics.com

ಪ್ಲೋರಿಡಾ: ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆ ಇಂದು ನಸುಕಿನಲ್ಲಿ ಇಸ್ರೋ ಸಂವಹನ ಉಪಗ್ರಹ ಜಿಸ್ಯಾಟ್-ಎನ್2 ಅನ್ನು ಯಶಸ್ವಿಯಾಗಿ ಉಡಾಯಿಸಿದೆ.

ಹೌದು, ಸ್ಪೇಸ್‌ಎಕ್ಸ್ನ ಫಾಲ್ಕನ್ 9 ರಾಕೆಟ್ ಬಳಸಿ ಸುಧಾರಿತ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಲಾಯಿತು.

https://www.newsics.com/wp-content/uploads/2024/11/K4EuNgnPgxIul0ct.mp4

ಇಸ್ರೋ ಮತ್ತು ಸ್ಪೇಸ್ ಎಕ್ಸ್ ನಡುವಿನ ಹಲವು ವಾಣಿಜ್ಯ ಸಹಭಾಗಿತ್ವ ಯೋಜನೆಗಳ ಪೈಕಿ ಇದು ಮೊಟ್ಟಮೊದಲನೇ ಯೋಜನೆಯಾಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ದುರೈರಾಜ್ ಅವರು ಈ ಬಗ್ಗೆ ಮಾಹಿತಿ ನೀಡಿ, ಜಿಸ್ಯಾಟ್ ಎನ್2 ಅಥವಾ ಜಿಸ್ಯಾಟ್ 20 ಉಪಗ್ರಹವನ್ನು ನಿಖರವಾಗಿ ಕಕ್ಷೆಗೆ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಜಿಸ್ಯಾಟ್ ಎನ್2 ಇಸ್ರೋದ ಉಪಗ್ರಹ ಕೇಂದ್ರ ಮತ್ತು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಸಂವಹನ ಉಪಗ್ರಹವಾಗಿದೆ. ಪ್ರತಿ ಸೆಕೆಂಡ್ ಗೆ 48 ಗಿಗಾಬೈಟ್ಸ್ ಪ್ರಸರಣ ಸಾಮರ್ಥ್ಯವನ್ನು ಹೊಂದಿದ್ದು, ಇದು ರಾಷ್ಟ್ರವ್ಯಾಪಿ ಬ್ರಾಡ್ ಬ್ಯಾಂಡ್ ಸೇವೆಗಳನ್ನು ವಿಸ್ತರಿಸಲು ಮತ್ತು ವಿಮಾನದೊಳಗೆ ಸಂಪರ್ಕವನ್ನು ಒದಗಿಸಲು ನೆರವಾಗಲಿದೆ.

ಇದು ಜಿಸ್ಯಾಟ್ ಸರಣಿಯ ಸಂವಹನ ಉಪಗ್ರಹಗಳ ಮುಂದುವರಿದ ಭಾಗವಾಗಿದ್ದು, ಡಾಟಾ ಪ್ರಸರಣ ಸಾಮರ್ಥ್ಯನ್ನು ಹೆಚ್ಚಿಸಲಿದೆ. ಜತೆಗೆ ಭಾರತದ ಸ್ಮಾರ್ಟ್ ಸಿಟಿ ಮಿಷನ್ ಗೆ ಅಗತ್ಯ ಸಂಪರ್ಕ ಮೂಲಸೌಕರ್ಯದ ವಿಸ್ತರಣೆಗೆ ಪೂರಕವಾಗಲಿದೆ. ಇದು 14 ವರ್ಷಗಳ ಕಾಲ ಕಾರ್ಯಾಚರಣೆ ನಡೆಸುವ ನಿರೀಕ್ಷೆ ಇದೆ.

TAGGED:ISRO rocket launch by Elon Musk company
Share This Article
Facebook Twitter Copy Link Print
Previous Article ಸಾಲಗಾರರಿಗೆ ಸಿಹಿ ಸುದ್ದಿ: ಬ್ಯಾಂಕ್ ಬಡ್ಡಿ ದರ ಇಳಿಕೆಗೆ ಕೇಂದ್ರ ಸೂಚನೆ
Next Article ಹೆಚ್ಚಿದ ಮಹಾ ಚುನಾವಣೆ ಕಾವು: ಎನ್‌ಸಿಪಿ-ಎಸ್‌ಸಿಪಿ ನಾಯಕನ ಕಾರಿನ ಮೇಲೆ ಕಲ್ಲು ತೂರಾಟ, ಅನಿಲ್ ದೇಶ್‌ಮುಖ್‌ಗೆ ತಲೆಗೆ ಪೆಟ್ಟು

Popular Posts

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

You Might Also Like

Uncategorized

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?