newsics.com
ಬೆಂಗಳೂರು: ಬಿಗ್ ಬಾಸ್ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಂದಿದ್ದಾರೆ. ದೊಡ್ಮನೆಗೆ ಎಂಟ್ರಿ ಆಗುವ ಮುನ್ನವೇ ಒಳಗಿರುವ ಸ್ಪರ್ಧಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಹೌದು, ಹನುಮಂತು ಬಳಿಕ ಬಿಗ್ ಬಾಸ್ ಮನೆಗೆ ಮತ್ತೊಬ್ಬರು ಹೊಸ ಸ್ಪರ್ಧಿಗಳು ಬಂದಿದ್ದಾರೆ. ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ಅವರನ್ನು ಸುದೀಪ್ ಅವರನ್ನು ವೆಲ್ ಕಂ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಮುಖವನ್ನು ಪ್ರೋಮೊದಲ್ಲಿ ರಿವೀಲ್ ಮಾಡಿಲ್ಲ.
ಒಬ್ಬ ಮಹಿಳಾ ಸ್ಪರ್ಧಿ ಹಾಗೂ ಪುರುಷ ಸ್ಪರ್ಧಿ ದೊಡ್ಮನೆಯೊಳಗೆ ಎಂಟ್ರಿ ಆಗಲಿದ್ದಾರೆ. ಶೋಭಾ ಶೆಟ್ಟಿ ಅವರ ಬಳಿ ಕಿಚ್ಚ ಅವರು ಒಳಗಡೆ ಇರುವವರು ಯಾರು ನಿಮಗೆ ಟಫ್ ಅಂಥ ಅನ್ನಿಸುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಅವರು ಯಾರೂ ಇಲ್ಲ ಎಂದು ಉತ್ತರಿಸಿರುವುದು ಪ್ರೋಮೊದಲ್ಲಿ ತೋರಿಸಲಾಗಿದೆ.