newsics.com
ನೀರಿಲ್ಲದೇ ಬದುಕಿಲ್ಲ. ಹಾಗಾಗಿ ಮನೆ, ಕಛೇರಿ, ಶಾಲೆ ಅಥವಾ ಪ್ರಯಾಣಿಸುವಾಗ ನೀರಿನ ಬಾಟಲಿಯನ್ನು ಒಯ್ಯುವುದು ಸಾಮಾನ್ಯವಾಗಿದೆ. ಹೀಗೆ ಒಯ್ಯುವ ನೀರಿನ ಬಾಟಲಿಗಳ ಒಳಭಾಗ ಕ್ಲೀನ್ ಮಾಡಲು ಕಷ್ಟಾಗ್ತಿದೆ. ಈ ಟಿಪ್ಸ್ ಫಾಲೋ ಮಾಡಿ..
ಮೊದಲು ಬಾಟಲಿಯೊಳಗೆ ಬೆಚ್ಚಗಿನ ನೀರಿನ್ನು ತುಂಬಿಸಿ. ಈಗ ಡಿಶ್ ವಾಶರ್ ಲಿಕ್ವೆಡ್ ಸೋಪ್ನ ಕೆಲ ಹನಿಗಳನ್ನು ನೀರಿನೊಳಗೆ ಮಿಕ್ಸ್ ಮಾಡಿ. ಈಗ ಇದನ್ನು ಚೆನ್ನಾಗಿ ಅಲ್ಲಾಡಿಸಿ, 2 ರಿಂದ 4 ನಿಮಿಷಗಳ ಕಾಲ ಬಿಡಿ. ಈಗ ಬ್ರಶ್ ಸಹಾಯದಿಂದ ಬಾಟಲಿಯೊಳಗೆ ಚೆನ್ನಾಗಿ ಉಜ್ಜಿ. ಕೆಳಭಾಗದ ಜೊತೆಗೆ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ಅಲ್ಲದೇ ಬಾಟಲಿಯ ಮುಚ್ಚಳವನ್ನು ಚೆನ್ನಾಗಿ ಉಜ್ಜುವುದನ್ನು ಮರೆಯಬೇಡಿ.
ಈಗ ಬಾಟಲಿಯನ್ನು ನಲ್ಲಿ ನೀರಿನ ಕೆಳಗೆ ಚೆನ್ನಾಗಿ ಅಲ್ಲಾಡಿಸಿ, ತೊಳೆಯುತ್ತಾ, ಬಾಟಲಿ ಒಳಗಿರುವ ನೀರನ್ನು ಹೊರಗೆ ಚೆಲ್ಲಿ. ನಂತರ ಬಿಸಿಲಿರುವ ಸ್ಥಳದಲ್ಲಿ ಬಾಟಲಿಯನ್ನು ಒಣಗಿಸಿ. ಈಗ ಒಣಗಿದ ಬಾಟಲಿಯನ್ನು ಮುಚ್ಚಳದಿಂದ ಮುಚ್ಚಿಡಿ. ಸ್ವಲ್ಪ ಅಡುಗೆ ಸೋಡಾವನ್ನು ಬಾಟಲಿಯೊಳಗೆ ಹಾಕಿ ಮತ್ತು ತಣ್ಣನೆಯ ನೀರನ್ನು ಸುರಿಯಿರಿ. ಈಗ ಬಾಟಲಿಗೆ ಮುಚ್ಚಳವನ್ನು ಮುಚ್ಚಿ ಚೆನ್ನಾಗಿ ಅಲ್ಲಾಡಿಸಿ. ರಾತ್ರಿಯಿಡೀ ಹಾಗೆಯೇ ಬಿಡಿ. ನಂತರ ಬೆಳಗ್ಗೆದ್ದು ಬಾಟಲಿಯನ್ನು ಬ್ರಶ್ನಿಂದ ಸ್ಕ್ರಬ್ ಮಾಡಿ ಚೆನ್ನಾಗಿ ತೊಳೆಯಿರಿ. ನಂತರ ಬೆಳಗ್ಗೆದ್ದು ಬಾಟಲಿಯನ್ನು ಚೆನ್ನಾಗಿ ಅಲುಗಾಡಿಸಿ, ಬ್ರಶ್ನಿಂದ ಚೆನ್ನಾಗಿ ಸ್ಕ್ರಬ್ ಮಾಡಿ. ಈಗ ಸ್ವಚ್ಛವಾದ ನೀರಿನಿಂದ ಬಾಟಲಿಯನ್ನು ತೊಳೆಯಿರಿ.