newsics.com
ಫಿಲಿಪೈನ್ಸ್‌ನಲ್ಲಿರುವ ದೈತ್ಯ ಕೋಳಿಯ ಆಕಾರದ ಹೋಟೆಲಿನ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಕೋಳಿಯ ಆಕಾರದ ಹೋಟೆಲ್ 39 ಅಡಿ ಎತ್ತರವಿದ್ದು, ಇದನ್ನು ರಿಕಾರ್ಡೊ ಕ್ಯಾನೊ ಗ್ವಾಪೊ ಟಾನ್ ಅವರು ವಿನ್ಯಾಸಗೊಳಿಸಿದ್ದಾರೆ. ಇದೀಗ ಈ ಹೋಟೆಲ್ “ಕೋಳಿಯ ಆಕಾರದಲ್ಲಿರುವ ವಿಶ್ವದ ಅತಿದೊಡ್ಡ ಕಟ್ಟಡ” ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನೂ ಪಡೆದುಕೊಂಡಿದೆ. ಹೋಟೆಲ್ 34.931 m (114 ft 7 in) ಎತ್ತರ, 12.127 m (39 ft 9 in) ಅಗಲ ಮತ್ತು 28.172 m (92 ft 5 in) ಉದ್ದವನ್ನು ಹೊಂದಿದೆ.
ಹೋಟೆಲ್ 15 ಕೊಠಡಿಗಳನ್ನು ಹೊಂದಿದೆ, ಇದು ಬೃಹತ್ ಮತ್ತು ಆರಾಮದಾಯಕವಾದ ಹಾಸಿಗೆಗಳು, ಹವಾನಿಯಂತ್ರಣ ಸೇರಿದಂತೆ ಐಷಾರಾಮಿ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ ಎಂದು ಹೇಳಲಾಗಿದೆ.