newsics.com
ಬೆಂಗಳೂರು: ಜೈಲಿನಿಂದ ರಿಲೀಸ್ ಆಗಿರುವ ದರ್ಶನ್ ಸದ್ಯ BGS ಆಸ್ಪತ್ರೆಯ ಸ್ಪೇಷಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಆದ್ರೆ ಆಸ್ಪತ್ರೆ ಬೆಡ್‌ನಲ್ಲಿದ್ದರೂ ನಟನಿಗೆ ಖಾಕಿ ಟೆನ್ಶನ್ ತಪ್ಪಿಲ್ಲ.
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನ ತನಿಖೆ ಮೇಲೆ ಹೊಸ ಅನುಮಾನ ಶುರುವಾಗಿದೆ. ಬೆನ್ನು ನೋವಿನ ಕಾರಣಕ್ಕೆ ಜೈಲಿನಿಂದ ಮಧ್ಯಂತರ ಬೇಲ್ ಮೇಲೆ ಹೊರ ಬಂದಿರುವ ನಟ ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಈಗಾಗಲೇ ಎಲ್ಲಾ ರೀತಿಯ ಟೆಸ್ಟ್‌ಗಳನ್ನು ಮಾಡಿದ್ದು, ರಿಪೋರ್ಟ್ ಬಗ್ಗೆ ಚರ್ಚೆ ನಡೆಸಿ ವೈದ್ಯರ ತಂಡ ಟ್ರೀಟ್‌ಮೆಂಟ್ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಒಂದು ವಾರದಲ್ಲಿ ವೈದ್ಯಕೀಯ ವರದಿ ಕೊಡುವಂತೆ ಹೈಕೋರ್ಟ್ ಸೂಚನೆ ಕೊಟ್ಟಿದ್ದು, ಮಂಗಳವಾರ ಅಥವಾ ಬುಧವಾರ ನ್ಯಾಯಾಲಯಕ್ಕೆ ವೈದ್ಯಕೀಯ ವರದಿ ಸಲ್ಲಿಕೆ ಆಗುವ ಸಾಧ್ಯತೆ ಇದೆ. ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ತನಿಖೆ ಮಾಡಿದ ಪೊಲೀಸರು, ಸಾಕಷ್ಟು ಲೋಪ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಮುಡಾ ಹಗರಣ ಕುರಿತು ಹೋರಾಟ ಮಾಡುತ್ತಿರುವ ಸ್ನೇಹಮಹಿ ಕೃಷ್ಣ, ತನಿಖಾಧಿಕಾರಿ ACP ಚಂದನ್ ವಿರುದ್ಧ ಆರೋಪ ಮಾಡಿದ್ದಾರೆ.