newsics.com
ನಿಮ್ಮ ಹತ್ರ ಜಸ್ಟ್ 1000 ರೂಪಾಯಿ ಇದ್ರೆ ಸಾಕು. ಪ್ರತಿದಿನ ಸಾವಿರಕ್ಕಿಂತ ಹೆಚ್ಚು ಲಾಭ ಮಾಡಿಕೊಳ್ಳಬಹುದು. ಹೌದು, ಇತ್ತೀಚಿಗೆ ಅನೇಕ ಜನರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದಾರೆ. ಆದರೆ ಅತಿ ಕಡಿಮೆ ಹೂಡಿಕೆಯಲ್ಲಿ ಉದ್ಯಮ ಆರಂಭಿಸಬಹುದು. ಇಂಥ ಬ್ಯುಸಿನೆಸ್ ಐಡಿಯಾ ನೀವು ಕೇಳೇ ಇರಲ್ಲ!.
ಹೌದು, ನಾವು ಹೇಳತಿರೋದು ಆಲೂಗೆಡ್ಡೆ ಚಿಪ್ಸ್ ವ್ಯಾಪಾರದ ಬಗ್ಗೆ. ಇನ್ನು ಆಲೂಗೆಡ್ಡೆ ಚಿಪ್ಸ್ ಇಷ್ಟಪಡುವವರ ಸಂಖ್ಯೆ ಬಹಳ ತುಂಬಾ ಇದೆ. ಕೆಲವರಿಗಂತೂ ಊಟ, ತಿಂಡಿಗೆ ಚಿಪ್ಸ್ ಇರಲೇಬೇಕು. ಹೀಗಾಗಿ, ತಿಂಡಿ ತಿನಿಸುಗಳಿಗೆ ಉತ್ತಮ ಬೇಡಿಕೆ ಇರುವ ಈ ಹೊತ್ತಿನಲ್ಲಿ ಇಂತಹ ಉದ್ಯಮ ಆರಂಭಿಸುವುದು ಒಳ್ಳೆಯದು. ಈ ವ್ಯವಹಾರದ ಉತ್ತಮ ಪ್ರಯೋಜನವೆಂದರೆ ಇದನ್ನು ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದು.
ಕೇವಲ 1000 ರೂಪಾಯಿಗೆ ಯಂತ್ರವನ್ನು ಖರೀದಿಸುವ ಮೂಲಕ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಲಾಭಗಳು ಪ್ರಾರಂಭವಾಗುತ್ತಿದ್ದಂತೆ, ಲಾಭವನ್ನು ಹೆಚ್ಚಿಸಲು ಹರಡುವಿಕೆಯನ್ನು ವಿಸ್ತರಿಸಬಹುದು. ಇದಲ್ಲದೇ ಕಚ್ಚಾವಸ್ತುಗಳಿಗೆ ಒಂದಿಷ್ಟು ಹಣ ಖರ್ಚು ಮಾಡಬೇಕು. ಮೊದಲ ಹಂತದಲ್ಲಿ ರೂ.100ರಿಂದ 200 ದರದಲ್ಲಿ ಕಚ್ಚಾವಸ್ತು ಖರೀದಿಸಬಹುದು.
ನೀವು ಈ ಯಂತ್ರವನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಹುಡುಕಬಹುದು. ಚಿಪ್ಸ್ ಅನ್ನು ಯಾವುದೇ ಮೇಜಿನ ಮೇಲೆ ಇರಿಸುವ ಮೂಲಕ ನೀವು ಸುಲಭವಾಗಿ ಕತ್ತರಿಸಬಹುದು. ಅಲ್ಲದೆ, ಈ ಯಂತ್ರಕ್ಕೆ ಯಾವುದೇ ಕರೆಂಟ್‌ನ ಅಗತ್ಯವಿಲ್ಲ. ನೀವು ಉತ್ತಮ ಗುಣಮಟ್ಟ ಮತ್ತು ರುಚಿಯೊಂದಿಗೆ ಆಲೂಗೆಡ್ಡೆ ಚಿಪ್ಸ್ ಅನ್ನು ಸಹ ತಯಾರಿಸಿದರೆ, ನಿಮ್ಮ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ ಮತ್ತು ಬೇಡಿಕೆ ಹೆಚ್ಚಾಗುತ್ತದೆ.
ಮನೆಯ ಮುಂದೆ ಸ್ಟಾಲ್‌ನಿಂದ ಮಾರಾಟ ಮಾಡಲು ಪ್ರಾರಂಭಿಸಬಹುದು. ಕೆಲವು ಅಂಗಡಿಯವರೊಂದಿಗೆ ಮಾತನಾಡಿ ಒಪ್ಪಂದ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ವ್ಯಾಪಾರವು ಹೆಚ್ಚು ಜನರನ್ನು ತಲುಪುತ್ತದೆ ಮತ್ತು ಜನಪ್ರಿಯವಾಗುತ್ತದೆ. ಆಲೂಗೆಡ್ಡೆ ಚಿಪ್ಸ್ ಆದಾಯವು ವೆಚ್ಚಕ್ಕಿಂತ 7 ಪಟ್ಟು ಹೆಚ್ಚು.
ದಿನಕ್ಕೆ 10 ಕೆ.ಜಿ ಆಲೂಗೆಡ್ಡೆ ಚಿಪ್ಸ್ ಮಾರಿದರೆ ಸುಲಭವಾಗಿ 1000 ರೂಪಾಯಿ ಗಳಿಸಬಹುದು.
1000 ರೂ.ಯಿಂದ ಈ ಬ್ಯುಸಿನೆಸ್ ಶುರು ಇಂಥ ಬ್ಯುಸಿನೆಸ್ ಐಡಿಯಾ ನೀವು ಕೇಳೇ ಇರಲ್ಲ!