newsics.com
ಉತ್ತರ ಕನ್ನಡ: ದೀಪಾವಳಿ ಪಾಡ್ಯದಂದು ಉತ್ತರ ಕನ್ನಡದ ಶಿರಸಿಯಲ್ಲಿ ಮಾರಿ ಕೋಣ ಮೆರವಣಿಗೆ ಮಾಡಲಾಯಿತು.
ಹೌದು, ಮಾರಿಕಾಂಬಾ ಜಾತ್ರೆಯ ಪೂರ್ವದಲ್ಲಿ ಈ ಮೆರವಣಿಗೆ ಮಾಡಲಾಗುತ್ತದೆ. ಇನ್ನು ಕೋಣವನ್ನು ಹೊರಗೆ ತರುವುದು ಎರಡೇ ಬಾರಿ. ಒಂದು ಜಾತ್ರೆಯ ಮುನ್ನಾ ಮೆರವಣಿಗೆಗೆ, ಇನ್ನೊಂದು ದೀಪಾವಳಿ ಪಾಡ್ಯದ ಸಾಯಂಕಾಲದಂದು. ಈ ಕೋಣ ನಿಯಂತ್ರಿಸಲು 10 ಜನ ಬೇಕು. ಇನ್ನು ಮಾರಿ ಕೋಣಕ್ಕೆ ಅಡಿಕೆ ಹಾರ, ನಾಗ ಕಿರೀಟ, ಕೇಸರಿ ವಸ್ತ್ರ, ಗೆಜ್ಜೆ, ಚೆಂಡು ಹೂವು ಇವುಗಳಿಂದ ಮಾರಿ ಅಲಂಕಾರ ಮಾಡಲಾಗುತ್ತದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಕೋಣ ರಾತ್ರಿ ವೇಳೆಗೆ ದೇಗುಲ ಸೇರುತ್ತದೆ.
ಮಾರಿಕಾಂಬೆ ಕೃಷಿ ಪ್ರಧಾನ ದೇವತೆ, ಮೊದಲು ಮಲೆನಾಡು-ಕರಾವಳಿಯಲ್ಲಿ ಕೋಣದಿಂದ ಉಳುಮೆ ಮಾಡಲಾಗುತ್ತಿತ್ತು. ಅದರ ಪ್ರೀತ್ಯರ್ಥವಾಗಿ “ಪಟ್ಟದ ಕೋಣ” ವನ್ನು ರಾಜ ಮರ್ಯಾದೆಯಿಂದ ಸಾಕಲಾಗುತ್ತದೆ.