Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಾಜ್ಯ ಸರ್ಕಾರದ ವರ್ಗಾವಣೆ ಧೋರಣೆಗೆ ಬೇಸರ: ಕೇಂದ್ರ ಸೇವೆಗೆ ಹೊರಟಿದೆ ಯುವ ಐಎಫ್ಎಸ್ ಅಧಿಕಾರಿ ದಂಪತಿ!
ಕರ್ನಾಟಕದೇಶಪ್ರಮುಖ

ರಾಜ್ಯ ಸರ್ಕಾರದ ವರ್ಗಾವಣೆ ಧೋರಣೆಗೆ ಬೇಸರ: ಕೇಂದ್ರ ಸೇವೆಗೆ ಹೊರಟಿದೆ ಯುವ ಐಎಫ್ಎಸ್ ಅಧಿಕಾರಿ ದಂಪತಿ!

Share
2 Min Read
SHARE

newsics.com
ಬೆಂಗಳೂರು: ರಾಜ್ಯ ಸರ್ಕಾರದ ವರ್ಗಾವಣೆ ನೀತಿಯಿಂದ ಬೇಸತ್ತ ರಾಜ್ಯದ ಯುವ ಐಎಫ್ಎಸ್ ದಂಪತಿ ಕೇಂದ್ರ ಸೇವೆಗೆ ತೆರಳಲು ಸಿದ್ಧವಾಗಿದೆ.
2011ನೇ ಸಾಲಿನ ಐಎಫ್‌ಎಸ್‌ ಅಧಿಕಾರಿ ಚಿಕ್ಕಬಳ್ಳಾಪುರ ಮೂಲದ ಡಿ.ಮಹೇಶ್‌ಕುಮಾರ್‌ ಹಾಗೂ ಅದೇ ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿ ಗುಜರಾತ್ ಮೂಲದ ದೀಪ್‌ ಕಂಟ್ರಾಕ್ಟರ್‌ ಅವರು 13 ವರ್ಷದಿಂದ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಬ್ಬರಿಗೂ ಇನ್ನೆರಡು ತಿಂಗಳಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಸಿಗಲಿದೆ.

ಆದರೆ, ರಾಜ್ಯ ಸರ್ಕಾರದ ವರ್ಗಾವಣೆ ಧೋರಣೆಗೆ ಬೇಸತ್ತು ಸದ್ಯದಲ್ಲೇ ಈ ದಂಪತಿ ಕರ್ನಾಟಕದಿಂದ ನಿರ್ಗಮಿಸಲಿದೆ. ಹಿಮಾಚಲ ಪ್ರದೇಶದ ಮಸ್ಸೂರಿಯಲ್ಲಿರುವ ಲಾಲ್‌ಬಹದ್ದೂರ್ ಶಾಸ್ತ್ರಿ ಅಕಾಡೆಮಿಗೆ ನಿಯೋಜನೆ ಮೇಲೆ ದಂಪತಿ ತೆರಳಲಿದ್ದಾರೆ. ಅದು ಕೇಂದ್ರ ಸೇವೆಗೆ ಆಯ್ಕೆಯಾಗುವ ಅಧಿಕಾರಿಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿದ್ದು, ಅಲ್ಲಿ ಈ ದಂಪತಿ ಅಧ್ಯಾಪಕರಾಗಿ ಕೆಲಸ ಮಾಡಲಿದ್ದಾರೆ.

ಸದ್ಯ ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ನಿರ್ದೇಶಕರಾಗಿರುವ ಮಹೇಶ್‌ ಕುಮಾರ್‌ ಧಾರವಾಡ ಡಿಸಿಎಫ್‌ ಆಗಿ, ನಂತರ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕರಾಗಿ ಉತ್ತಮವಾಗಿ ಕೆಲಸ ಮಾಡಿ ಹೆಸರು ಪಡೆದವರು.
ಮಹೇಶ್‌ ಕುಮಾರ್‌ ಅವರನ್ನು ಪ್ರೀತಿಸಿ ಮದುವೆಯಾದ ನಂತರ ದೀಪ್ ಕಂಟ್ರಾಕ್ಟರ್ ಕರ್ನಾಟಕ ಕೇಡರ್‌ಗೆ ಬಂದವರು. ಧಾರವಾಡ, ಮೈಸೂರುಗಳಲ್ಲಿ ಡಿಸಿಎಫ್‌ ಆಗಿದ್ದರು. ಬಿಳಿಗಿರಿರಂಗನಬೆಟ್ಟ ಹುಲಿಧಾಮ ನಿರ್ದೇಶಕರಾಗಿದ್ದರು. ಹುಲಿ ಯೋಜನೆ ನಿರ್ದೇಶಕರಾದ ಕರ್ನಾಟಕದ ಮೊದಲ ಮಹಿಳಾ ಐಎಫ್‌ಎಸ್‌ ಅಧಿಕಾರಿ ಎಂಬುದು ಅವರ ಹಿರಿಮೆ.

ದೀಪ್‌ ಅವರು ಅಂಟಾರ್ಟಿಕಾ ಯಾತ್ರೆ ಕೈಗೊಂಡು ಬಂದ ಭಾರತದ ಮೊದಲ ಅರಣ್ಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.
ಆಗಸ್ಟ್‌ನಲ್ಲಿ ದೀಪ್‌ ಅವರಿಗೆ ಯಾವುದೇ ಹುದ್ದೆ ನೀಡದೇ ವರ್ಗ ಮಾಡಲಾಗಿತ್ತು. ಚೆನ್ನಾಗಿ ಕೆಲಸ ಮಾಡಿದರೂ ಹುದ್ದೆ ನೀಡದೇ ವರ್ಗ ಮಾಡಿದ್ದು ಅವರಿಗೆ ಬೇಸರ ತಂದಿತ್ತು. ಇದಾಗಿ ಮೂರು ತಿಂಗಳಾಗುತ್ತಾ ಬಂದಿದ್ದರೂ ಹುದ್ದೆ ನೀಡಿರಲಿಲ್ಲ. ನಂತರ ಬಾಗಲಕೋಟೆ ಡಿಸಿಎಫ್‌ ಆಗಿ ಹುದ್ದೆ ನೀಡುವ ಪ್ರಸ್ತಾವನೆ ಹೋದರೂ ಆದೇಶವಾಗಿರಲಿಲ್ಲ. ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ಸಂರಕ್ಷಣಾಧಿಕಾರಿ(ಸಿಎಫ್‌) ಬಡ್ತಿಗೆ ಇನ್ನು ನಾಲ್ಕು ತಿಂಗಳು ಇದೆ. ಬಿಆರ್‌ಟಿಯಲ್ಲೇ ಮುಂದುವರಿಸಲು ಕೋರಿದ್ದರೂ ಹುದ್ದೆ ನೀಡದೇ ವರ್ಗ ಮಾಡಿದ್ದು ಅವರಿಗೆ ಬೇಸರವಾಗಿದೆ ಎನ್ನಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ, ಹಿರಿಯ ಅರಣ್ಯಾಧಿಕಾರಿಗಳಿಗೆ ಕೋರಿಕೆ ಸಲ್ಲಿಸಿದ್ದರೂ ಹುದ್ದೆ ನೀಡಿರಲಿಲ್ಲ.
ಇದರಿಂದ ಬೇಸರಗೊಂಡ ದೀಪ್‌ ಅವರ ಜತೆಗೆ ಮಹೇಶ್‌ ಕುಮಾರ್‌ ಕೂಡ ಕೇಂದ್ರ ಸೇವೆಗೆ ಹೋಗಲು ನಿರ್ಧರಿಸಿ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದ್ದು, ಶೀಘ್ರದಲ್ಲೇ ಕೇಂದ್ರ ಸೇವೆಗೆ ತೆರಳಲಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

https://x.com/mahesh_ifs/status/1746561884105457927?t=9edIE1BHkzOd7w4Cq1aaWQ&s=19

https://x.com/i3masterminds/status/1840357223207432276?t=ItF9DMZTcrUh95EdGohRWg&s=19

ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಕಸಾಪ ಅಧ್ಯಕ್ಷರ ತೀರ್ಮಾನವೇ ಅಂತಿಮವಲ್ಲ: ಸಚಿವ ಚಲುವರಾಯಸ್ವಾಮಿ

ಬಿಗ್ ಬಾಸ್‌ ಬಿಟ್ರು, ಡ್ಯಾನ್ಸ್ ಶೋನಲ್ಲಿ ಸ್ಟೆಪ್ ಹಾಕಿದ್ರು ಲಾಯರ್! ಕಲರ್ಸ್‌ನಿಂದ ಝೀಗೆ ಜಿಗಿದ ಜಗದೀಶ್!

ಇಂದು ಐಶ್ವರ್ಯಾ ರೈ ಬಚ್ಚನ್ ಬರ್ತ್‌ಡೆ, ಕೊನೆಗೂ ಅವರಿಬ್ಬರು ವಿಶ್ ಮಾಡಲೇ ಇಲ್ಲ! ಒಂಟಿಯಾದ್ರಾ ಅತಿ ಶ್ರೀಮಂತ ನಟಿ?

ಬಿಜಿಎಸ್‌ ಆಸ್ಪತ್ರೆಗೆ ದಾಖಲಾದ ದರ್ಶನ್: ಬೆನ್ನು ನೋವಿನ ಜೊತೆ ನಟ ದರ್ಶನ್‌ಗೆ ಮತ್ತೊಂದು ಸಮಸ್ಯೆ

TAGGED:Fed up with the state government's transfer policy: A young IFS couple has left the state for central service!
Share This Article
Facebook Twitter Copy Link Print
Previous Article ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಕಸಾಪ ಅಧ್ಯಕ್ಷರ ತೀರ್ಮಾನವೇ ಅಂತಿಮವಲ್ಲ: ಸಚಿವ ಚಲುವರಾಯಸ್ವಾಮಿ
Next Article ಶುಭೋದಯ, ದೀಪಾವಳಿ ಹಬ್ಬದ ಶುಭಾಶಯಗಳು, ಕಾರ್ತಿಕ ಶುಕ್ಲ ಪ್ರತಿಪದಾ, 2-11-2024, ಶನಿವಾರ

Popular Posts

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

You Might Also Like

ಪ್ರಮುಖಕರ್ನಾಟಕದೇಶ

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read
ಕರ್ನಾಟಕ

Uttarakannada Trauma Center | ಕುಮಟಾದಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಆರಂಭ

3 Min Read
ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?