newsics.com
ಬೆಂಗಳೂರು: ಭೂಮಿ ವಿವಾದವೊಂದರಲ್ಲಿ ಏನೂ ಅರಿಯದ 17 ವರ್ಷದ ಬಾಲಕನ ಶಿರಚ್ಛೇದಗೊಂಡಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ವರದಿಯಾಗಿದೆ.
17 ವರ್ಷದ ಬಾಲಕನ ತಲೆ ಕತ್ತರಿಸಿದ್ದು, ತಾಯಿ ತನ್ನ ಮಗನ ರುಂಡವನ್ನು ತನ್ನ ಮಡಿಲಲ್ಲಿಟ್ಟುಕೊಂಡು ರೋಧಿಸುತ್ತಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿತ್ತು.
ಕಬಿರುದ್ದೀನ್ ಗ್ರಾಮದಲ್ಲಿ ಇಬ್ಬರ ನಡುವೆ ಭೂಮಿ ವ್ಯಾಜ್ಯ ಉಂಟಾಗಿತ್ತು, ಇದು ತೀವ್ರಸ್ವರೂಪ ಪಡೆದುಕೊಂಡು ಅ.30 ರಂದು ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ರಾಮ್ಜಿತ್ ಯಾದವ್ ಎಂಬುವರ 17 ವರ್ಷದ ಪುತ್ರನ ಶಿರಚ್ಛೇದವಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಶಿರಚ್ಛೇದ ಮಾಡಿದ ವ್ಯಕ್ತಿ ತಪ್ಪಿಸಿಕೊಂಡಿದ್ದು ಆತನಿಗಾಗಿ ಹುಡುಕಾಟ ಆರಂಭವಾಗಿದೆ.
ಮೀನುಗಾರರ ಮಾರಾಮಾರಿ, ಓರ್ವನ ಹತ್ಯೆಗೈದು ಬೋಟ್ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು