ಮೀನುಗಾರರ ಮಾರಾಮಾರಿ, ಓರ್ವನ ಹತ್ಯೆಗೈದು ಬೋಟ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

newsics.com ಮುಂಬೈ: ಸಿಂಧುದುರ್ಗ ಜಿಲ್ಲೆಯಲ್ಲಿ ಮೀನುಗಾರನನ್ನು ಹತ್ಯೆಗೈದು ಬೋಟ್‌ಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ನಡೆದಿದೆ. ಮೀನುಗಾರರ ನಡುವೆ ವಾಗ್ವಾದದ ನಂತರ ಈ ಕೊಲೆ ನಡೆದಿದೆ ಎನ್ನಲಾಗಿದೆ. ದೋಣಿಯಲ್ಲಿದ್ದ ಮೀನುಗಾರರು ತಾಂಡೇಲ್‌ನನ್ನು ಕೊಂದು ನಂತರ ದೋಣಿಗೆ ಡೀಸೆಲ್ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಅಕ್ಟೋಬರ್ 28ರಂದೇ ಸಿಂಧುದುರ್ಗದ ದೇವಗಢದ ಕುಂಕೇಶ್ವರ ಬಳಿಯ ಸಮುದ್ರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೋಟ್ ಕೂಡ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸಿಂಧುದುರ್ಗದಲ್ಲಿ … Continue reading ಮೀನುಗಾರರ ಮಾರಾಮಾರಿ, ಓರ್ವನ ಹತ್ಯೆಗೈದು ಬೋಟ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು