newsics.com
ಮುಂಬೈ: ಸಿಂಧುದುರ್ಗ ಜಿಲ್ಲೆಯಲ್ಲಿ ಮೀನುಗಾರನನ್ನು ಹತ್ಯೆಗೈದು ಬೋಟ್‌ಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ನಡೆದಿದೆ.
ಮೀನುಗಾರರ ನಡುವೆ ವಾಗ್ವಾದದ ನಂತರ ಈ ಕೊಲೆ ನಡೆದಿದೆ ಎನ್ನಲಾಗಿದೆ. ದೋಣಿಯಲ್ಲಿದ್ದ ಮೀನುಗಾರರು ತಾಂಡೇಲ್‌ನನ್ನು ಕೊಂದು ನಂತರ ದೋಣಿಗೆ ಡೀಸೆಲ್ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಅಕ್ಟೋಬರ್ 28ರಂದೇ ಸಿಂಧುದುರ್ಗದ ದೇವಗಢದ ಕುಂಕೇಶ್ವರ ಬಳಿಯ ಸಮುದ್ರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೋಟ್ ಕೂಡ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಸಿಂಧುದುರ್ಗದಲ್ಲಿ ತೀವ್ರ ವಾಗ್ವಾದದ ನಂತರ ಮಾರಾಮಾರಿ ನಡೆದಿದ್ದು, ದೈಹಿಕ ಹಲ್ಲೆ ಸೇರಿದಂತೆ ಮೀನುಗಾರನ ಸಾವಿಗೆ ಕಾರಣವಾಯಿತು. ಮೃತನನ್ನು ತಾಂಡೇಲ್ ರವೀಂದ್ರ ನಾಟೇಕರ್ ಎಂದು ಗುರುತಿಸಲಾಗಿದೆ. ಹತ್ತಿರದ ದೋಣಿಗಳು ಮೀನುಗಾರನನ್ನು ಉಳಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಜೈಲಿನಿಂದ ದರ್ಶನ್ ಬಿಡುಗಡೆಗೆ ರಚಿತಾ ರಾಮ್, ತನಿಷ್ ಕುಪ್ಪಂಡ ಫುಲ್ ಖುಷ್
ಜೈಲ್‌ನಿಂದ ಕುಂಟುತ್ತಲೇ ಹೊರಬಂದ ನಟ ದರ್ಶನ್, ಮೊದಲು ಎಲ್ಲಿಗೆ ಹೋಗ್ತಾರೆ ಡಿ ಬಾಸ್?
ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಮಾರ್ಪಾಡಿಗೆ ಸರ್ಕಾರ ನಿರ್ಧಾರ: ಡಿಸಿಎಂ ಡಿಕೆ ಸುಳಿವು