newsics.com
ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ.
ನ.6ರಂದು ಅರಣ್ಯ ಇಲಾಖೆ & ಕಂದಾಯ ಇಲಾಖೆ ಜಂಟಿ ಸರ್ವೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಕೋಲಾರದ ಹೊಸಹುಡ್ಯ ಸರ್ವೆ ನಂ.1, 2ರಲ್ಲಿನ 122 ಎಕರೆ ಭೂಮಿಯನ್ನು ಏಳು ಜನ ಒತ್ತುವರಿದಾರರ ಪೈಕಿ ರಮೇಶ್ ಕುಮಾರ್ ಸಹ ಒಬ್ಬರಾಗಿದ್ದಾರೆ.
ಈ ಹಿಂದೆ ಡಿ.ಕೆ.ರವಿ ಡಿಸಿ ಆಗಿದ್ದಾಗ ಜಂಟಿ ಸರ್ವೆ ಮಾಡಲಾಗಿತ್ತು. ಹಲವು ಗೊಂದಲಗಳಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಮರು ಸರ್ವೆ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಸರ್ವೆ ವೇಳೆ ಸ್ಥಳದಲ್ಲಿ ಹಾಜರಿರುವಂತೆ ರಮೇಶ್ ಕುಮಾರ್ ಗೆ ಪತ್ರ ಬರೆಯಲಾಗಿತ್ತು. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ಅರಣ್ಯ ವಲಯದ ಜಿನಗಲಕುಂಟೆ ಗ್ರಾಮದಲ್ಲಿ 64 ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ.