newsics.com
ನಟ ನಾಗ ಚೈತನ್ಯ ಅವರು ಸಮಂತಾ ಜತೆಗಿನ ವಿಚ್ಛೇದನದ ನಂತರ ತೆಲುಗಿನ ನಾಯಕಿ ಶೋಭಿತಾ ಧೂಳಿಪಾಲ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು.
ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಯುರೋಪ್ ಪ್ರವಾಸದ ಫೋಟೋಗಳು ಸಹ ವೈರಲ್ ಆಗಿದ್ದವು.

ವೈನ್ ಟೆಸ್ಟ್ ಪಾರ್ಟಿ ನಡೆಯುತ್ತಿದ್ದಾಗ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದರು. ಆಗ ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿತ್ತು. ಬಳಿಕ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದರು. ಈ ವಿಷಯವನ್ನು ನಾಗಾರ್ಜುನ ಅಧಿಕೃತವಾಗಿ ಪ್ರಕಟಿಸಿದ್ದರು. ಶೋಭಿತಾ-ನಾಗಚೈತನ್ಯ ಕೆಲವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು..
ಶೋಭಿತಾ ತಮ್ಮ ನಿಶ್ಚಿತಾರ್ಥದ ಸಮಯದಲ್ಲಿ ತೆಗೆದ ಕೆಲವು ಫೋಟೋಗಳನ್ನು ತಮ್ಮ Instagram ನಲ್ಲಿ ‘ನಾವು ಹೇಗೆ ಭೇಟಿಯಾದೆವು ಎಂಬುದು ಮುಖ್ಯವಲ್ಲ.. ಪರಿಚಯ ಹೇಗೇ ಶುರುವಾದರೂ.. ಪ್ರೀತಿಯಲ್ಲಿ ನಮ್ಮ ಹೃದಯಗಳು ಒಂದಾಗಿವೆ..’ ಎಂದು ಕ್ಯಾಪ್ಷನ್ ನೀಡಿ ಫೋಟೋಗಳನ್ನು ಹಂಚಿಕೊಂಡಿದ್ದರು.

ನಿಶ್ಚಿತಾರ್ಥದ ನಂತರ ಶೋಭಿತಾ ಹೆಚ್ಚು ಹೊರಗೆ ಕಾಣಿಸಲಿಲ್ಲ. ಇತ್ತೀಚೆಗೆ ಶೋಭಿತಾ ‘ಮಂಕಿ ಮ್ಯಾನ್’ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಪ್ರಸ್ತುತ ನಟಿಯ OTT ಸಿನಿಮಾ ‘ಲವ್ ಸಿತಾರಾ’ G5 ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ.
ಶೋಭಿತಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಬೇಬಿ ಬಂಪ್‌ನೊಂದಿಗೆ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಆದರೆ ಅವುಗಳಿಗೆ ‘ಲವ್ ಸಿತಾರಾ’ ಶೂಟಿಂಗ್ ಚಿತ್ರದ ಕ್ಯಾಪ್ಷನ್ ನೀಡಿದ್ದಾರೆ. ಪ್ರಚಾರದ ಭಾಗವಾಗಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆಯಂತೆ.
ಸದ್ಯ ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮದುವೆಗೆ ಮುಂಚೆಯೇ ಶೋಭಿತಾ ಗರ್ಭಿಣಿಯಾದ್ರಾ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.
ಟಾಕ್ಸಿಕ್’ ಸಿನಿಮಾಗಾಗಿ ಮರಗಳ ಬಲಿ; ಯಶ್ ಸಿನಿಮಾ ವಿರುದ್ಧ ಈಶ್ವರ್ ಖಂಡ್ರೆ ಕೆಂಡಾಮಂಡಲ!