newsics.com
ಕೇರಳ : ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬೆಂಗಾವಲು ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಪಿಣರಾಯಿ ವಿಜಯನ್ ತೆರಳುತ್ತಿದ್ದಾಗ ವಾಮನಪುರಂ ಪಾರ್ಕ್ ಜಂಕ್ಷನ್ ಬಳಿ ಈ ಅಪಘಾತ ನಡೆದಿದೆ.
ಕೇರಳ ಸಿಎಂ ಬೆಂಗಾವಲು ವಾಹನಗಳ ಜೊತೆ ತೆರಳುತ್ತಿದ್ದಾಗ ಪೈಲಟ್ ವಾಹನ ಸ್ಕೂಟರ್ಗೆ ಡಿಕ್ಕಿ ತಪ್ಪಿಸಲು ದಿಢೀರನೇ ಬ್ರೇಕ್ ಹಾಕಿದೆ. ಮುಂದಿನ ವಾಹನ ಸಡನ್ ಬ್ರೇಕ್ ಹಾಕಿದ್ದರಿಂದ ಕೇರಳ ಸಿಎಂ ಬೆಂಗಾವಲಿಗಿದ್ದ 5 ವಾಹನಗಳು ಹಿಂದಿನಿಂದ ಡಿಕ್ಕಿಯಾಗಿವೆ.
https://twitter.com/Raajeev_Chopra/status/1850910282534772889