Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಭಾರತದಲ್ಲಿ ಮುಂದಿನ ದಿನಗಳಲ್ಲಿ ನಗದು ಹಣವೇ ಇರಲ್ಲ, ಡಿಜಿಟಲ್ ಕರೆನ್ಸಿ ಮಾತ್ರ: RBI ಗವರ್ನರ್ ಶಕ್ತಿಕಾಂತ ದಾಸ್
ದೇಶಪ್ರಮುಖ

ಭಾರತದಲ್ಲಿ ಮುಂದಿನ ದಿನಗಳಲ್ಲಿ ನಗದು ಹಣವೇ ಇರಲ್ಲ, ಡಿಜಿಟಲ್ ಕರೆನ್ಸಿ ಮಾತ್ರ: RBI ಗವರ್ನರ್ ಶಕ್ತಿಕಾಂತ ದಾಸ್

Share
2 Min Read
SHARE

newsics.com

ಕೋಲ್ಕತಾ: ಭಾರತದಲ್ಲಿ ಇನ್ನು ನಗದು ಹಣ ಇರುವುದಿಲ್ಲ. ಆರ್‌ಬಿಐ ನೋಟು ಪ್ರಿಂಟ್ ಮಾಡುವ ಪ್ರಮೇಯವೂ ಇಲ್ಲ. ಯಾರ ಬಳಿಯೂ ನಗದು ಹಣ ಇರಲ್ಲ, ವ್ಯವಹಾರವೂ ಇರುವುದಿಲ್ಲ. ಏನಿದ್ದರೂ ಡಿಜಿಟಲ್ ಕರೆನ್ಸಿ ಮಾತ್ರ ಎಂದು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಕೋಲ್ಕತಾದಲ್ಲಿ ನಡೆದ ವಾರ್ಷಿಕ ಜಿ30 ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸೆಮಿನಾರ್‌ನಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್ ಅವರು ಈ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಇನ್ಮುಂದೆ ನಗದು ಹಣ ಇರುವುದಿಲ್ಲ, ನಗದು ವಹಿವಾಟುಗಳು ಇರುವುದಿಲ್ಲ. ಎಲ್ಲವೂ ಡಿಜಿಟಲ್ ಕರೆನ್ಸಿ ಎಂದಿದ್ದಾರೆ. ನಾವು ಭವಿಷ್ಯದ ಡಿಜಿಟಲ್ ಕರೆನ್ಸಿಯಿಂದ ಪಲಾಯನ ಮಾಡಲು ಸಾಧ್ಯವಿಲ್ಲ.

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(CBDC)ಯಿಂದ ಅಂತಾರಾಷ್ಟ್ರೀಯ ಪಾವತಿಗಳು ಅತ್ಯಂತ ಸುಲಭವಾಗಿ ನಡೆಯಲಿವೆ. ಜತೆಗೆ ಈ ಪಾವತಿ ಹೆಚ್ಚು ಪರಿಣಾಮಕಾರಿಯಾಗಿದೆ. ವೆಚ್ಚ ಕಡಿಮೆ, ಹಣ ವರ್ಗಾವಣೆ, ವ್ಯವಹಾರದಲ್ಲಿ ವೆಚ್ಚಗಳು ಇರುವುದಿಲ್ಲ. ನೇರವಾಗಿ ಹಾಗೂ ತ್ವರಿತವಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇತರ ದೇಶಗಳೂ ಕೂಡ ಡಿಜಿಟಲ್ ಕರೆನ್ಸಿ ಅಳವಡಿಸಿಕೊಂಡರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಉದ್ಭವ ವಾಗುವುದಿಲ್ಲ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಈ ತಂತ್ರಜ್ಞಾವನ್ನು ಭಾರತ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವಾಗಿರುವ ಕಾರಣ ಇದು ಭವಿಷ್ಯವಾಗಲಿದೆ ಎಂದು ಶಕ್ತಿಕಾಂತ್ ಹೇಳಿದ್ದಾರೆ.

ಭಾರತದಲ್ಲಿ ಹಣದ ವ್ಯವಹಾರ ಇದೀಗ ಯುಪಿಐ ಮೂಲಕವೇ ಹೆಚ್ಚಾಗಿ ನಡೆಯುತ್ತಿದೆ. ವರ್ಗಾವಣೆ, ಖರೀದಿ ಸೇರಿದಂತೆ ಎಲ್ಲಾ ವಹಿವಾಟಗಳು ಸುಲಭವಾಗಿ ಯುಪಿಐ ಮೂಲಕ ನಡೆಯುತ್ತಿದೆ. ಈ ಡಿಜಿಟಲ್ ವಹಿವಾಟನ್ನು ಸಂಪೂರ್ಣವಾಗಿ ಭಾರತ ಆವರಿಸಿಕೊಳ್ಳಲಿದೆ. ಈ ಡಿಜಿಟಲ್ ವಹಿವಾಟಿಗೆ ಮತ್ತಷ್ಟು ಸುರಕ್ಷತೆ ಒದಗಿಸಲು ಎಲ್ಲಾ ತಯಾರಿಗಳು ನಡೆಯುತ್ತಿವೆ. ಭಾರತದಲ್ಲಿ ಸದ್ಯ 1 ಬಿಲಿಯನ್ ವಹಿವಾಟು ಯುಪಿಐ ಮೂಲಕ ನಡೆಯುತ್ತಿದೆ. ಇದು ಮುಂದಿನ ವರ್ಷಕ್ಕೆ ದುಪ್ಪಟ್ಟಾಗಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಭಾರತದ ಎಲ್ಲಾ ಕ್ಷೇತ್ರಗಳಲ್ಲಿ ಯುಪಿಐ ಪೇಮೆಂಟ್ ಅಥವಾ ಡಿಜಿಟಲ್ ಕರೆನ್ಸಿ ಪ್ರವೇಶ ಮಾಡಿದೆ. ಹಳ್ಳಿ ಹಳ್ಳಿಗಳಲ್ಲೂ ಇದೀಗ ಡಿಜಿಟಲ್ ಕರೆನ್ಸಿ ಮೂಲಕವೇ ವ್ಯವಹಾರ ನಡೆಯುತ್ತಿದೆ. ಹಂತ ಹಂತವಾಗಿ ಭಾರತದ ಎಲ್ಲೆಡೆ ನಗದು ವ್ಯವಹಾರ ಸಂಪೂರ್ಣವಾಗಿ ನಿಂತು ಹೋಗಲಿದೆ. ಇತ್ತ ನೋಟುಗಳು, ನಾಣ್ಯಗಳ ಚಲಾವಣೆ ಬಂದ್ ಆಗಲಿದೆ. ಎಲ್ಲವೂ ಡಿಜಿಟಲ್ ಕರೆನ್ಸಿ ಮೂಲಕವೇ ನಡೆಯಲಿದೆ ಎನ್ನುವುದು ಶಕ್ತಿಕಾಂತ ದಾಸ್ ಅಭಿಪ್ರಾಯ.

ಭಾರತದ ನಕಲಿ ನೋಟುಗಳು ಚಲಾವಣೆಯಾಗುತ್ತಿದೆ. ಆರ್‌ಬಿಐ ಈ ಕುರಿತು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಸಂಪೂರ್ಣವಾಗಿ ನಕಲಿ ನೋಟು ಹಾವಳಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇವೆಲ್ಲವನ್ನೂ ಪರಿಣಗಣಿಸಿ ಭವಿಷ್ಯದಲ್ಲಿ ಸುರಕ್ಷತೆ ಹಾಗೂ ಸುಭದ್ರ ವಹಿವಾಟಿಗೆ ಡಿಜಿಟಲ್ ಕರೆನ್ಸಿ ಅತ್ಯಗತ್ಯ. ಸದ್ಯ ಭಾರತ ಡಿಜಿಟಲ್ ಕರೆನ್ಸಿ ವಹಿವಾಟಿನಲ್ಲಿ ಮುಂದಿದೆ. ಬಹುತೇಕ ವ್ಯವಹಾರಗಳು ಡಿಜಿಟಲ್ ಕರೆನ್ಸಿ ಮೂಲಕವೇ ನಡೆಯುತ್ತಿದೆ. ಇದು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ವ್ಯಾಪಿಸಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

TAGGED:India will have no cash in futureonly digital currency: RBI Governor Shaktikanta Das
Share This Article
Facebook Twitter Copy Link Print
Previous Article ಶುಭೋದಯ… ಇಂದಿನ ಪಂಚಾಂಗ, ಆಶ್ವಯುಜ‌ ಕೃಷ್ಣ‌ ಪಕ್ಷ ಏಕಾದಶಿ, 28-10-2024, ಸೋಮವಾರ
Next Article newsics ದಿನ ಭವಿಷ್ಯ… 28-10-2024, ಸೋಮವಾರ, ಇಂದಿನ ನಿಮ್ಮ ರಾಶಿ‌ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?