newsics.com
ಹಾಸನ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸಿದ್ದೇಶ್ವರಸ್ವಾಮಿಯ ದರ್ಶನ ಪಡೆಯುವಾಗ ಬಲಗಡೆಯಿಂದ ಒಂದಲ್ಲ, ಎರಡಲ್ಲ ಒಟ್ಟು 3 ಹೂಗಳು ಬಿದ್ದಿದ್ದು ಇದು ದೇವರ ಶುಭ ಸೂಚನೆ ಎನ್ನಲಾಗುತ್ತಿದೆ.
ಸಿದ್ದೇಶ್ವರಸ್ವಾಮಿ ದರ್ಶನಕ್ಕೆ ಪತ್ನಿ, ಸೊಸೆ, ಮೊಮ್ಮಗನ ಜೊತೆ ಬಂದಿದ್ದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಅವರು ಗರ್ಭಗುಡಿ ಹೊರಭಾಗದಲ್ಲಿ ನಿಂತು ದೇವರ ದರ್ಶನ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಪೂಜಾರಿ ಪೂಜೆ ಸಲ್ಲಿಸುವಾಗ ಸಿದ್ದೇಶ್ವರ ಸ್ವಾಮಿಯ ಬಲಗಡೆಯಿಂದ 3 ಹೂವುಗಳು ಬಿದಿವೆ. ಇದು ಶುಭ ಸೂಚನೆ ಎನ್ನಲಾಗಿದೆ.
ದೇವರ ಮೇಲಿಂದ ಹೂವು ಬೀಳುವುದನ್ನ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೈ ಸನ್ನೆ ಮಾಡಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ.