newsics.com
ಉತ್ತರ ಪ್ರದೇಶ : 20 ರೂಪಾಯಿಗಾಗಿ ಮಹಿಳೆ ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ.
ಕೇವಲ 20 ರೂ.ಗೆ ಶುರುವಾದ ಜಗಳದ ನಂತರ ಮಹಿಳೆಯೊಬ್ಬರು ತಮ್ಮ ಚಪ್ಪಲಿಯನ್ನು ತೆಗೆದು ರಿಕ್ಷಾ ಚಾಲಕನಿಗೆ ನಡುರಸ್ತೆಯಲ್ಲೇ ಥಳಿಸಿದ್ದಾರೆ.
ಈ ವೇಳೆ ರಿಕ್ಷಾ ಚಾಲಕ ಹಾಗೂ ಮಹಿಳೆ ನಡುವೆ ತೀವ್ರ ವಾಗ್ವಾದ ನಡೆದಿದೆ. ಅಲ್ಲಿದ್ದ ವ್ಯಕ್ತಿಯೊಬ್ಬ ಇಬ್ಬರ ನಡುವಿನ ಜಗಳವನ್ನು ವಿಡಿಯೋ ಮಾಡತೊಡಗಿದ್ದಾರೆ.