newsics.com
ಜೈಪುರ: ಕರ್ವಾ ಚೌತ್‌ನ ದಿನದಂದು ಪತಿ ಮನೆಗೆ ತಡವಾಗಿ ಬಂದ ಕಾರಣ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ದಂಪತಿಯನ್ನು ಮೋನಿಕಾ (35) ಹಾಗೂ ಘನಶ್ಯಾಮ್ ಬಂಕರ್ (38) ಎಂದು ಗುರುತಿಸಲಾಗಿದೆ. ಪತ್ನಿಯ ಸಾವನ್ನು ಸಹಿಸಲಾಗದೇ ಪತಿಯು ನೇಣಿಗೆ ಶರಣಾಗಿರುವ ಘಟನೆ ರಾಜಸ್ಥಾನದ ಜೈಪುರದ ಹರ್ಮಡಾ ಪ್ರದೇಶದಲ್ಲಿ ನಡೆದಿದೆ.
ಕರ್ವಾ ಚೌತ್‌ನ ದಿನದಂದು ಪತಿ ಘನಶ್ಯಾಮ್ ಮನೆಗೆ ತಡವಾಗಿ ಬಂದಿದ್ದಾನೆ. ತಡವಾಗಿ ಬಂದಿದ್ದಕ್ಕೆ ಪತ್ನಿ ಮೋನಿಕಾ ಪತಿಯೊಂದಿಗೆ ಜಗಳವಾಡಿದ್ದಾಳೆ. ಜಗಳವಾಡಿದ ನಂತರ ಪತಿ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಅದ್ಯಾವುದಕ್ಕೂ ಬಗ್ಗದೇ ಅಲ್ಲಿಂದ ಹೊರಬಂದಿದ್ದಾಳೆ. ಹೊರಬಂದ ಪತ್ನಿ ವೇಗವಾಗಿ ಬರುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.