newsics.com
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳುಗಳು ಕಳೆದಿವೆ. ಈಗಾಗಲೇ ಜಾಮೀನು ಅರ್ಜಿ ಕೆಳ ಹಂತದ ಕೋರ್ಟ್ ನಲ್ಲಿ ರಿಜೆಕ್ಟ್ ಆಗಿದೆ. ಈ ಮಧ್ಯೆ ದರ್ಶನ್ ಗೆ ಕೊಂಚ ರಿಲೀಫ್ ಆಗುವಂತಹ ಬೆಳವಣಿಗೆ ನಡೆದಿದೆ.
ಹೌದು, ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್ ಗೆ ಫಿಜಿಯೋ ಥೆರಪಿ ಚಿಕಿತ್ಸೆ ಕೊಡಿಸಲಾಗಿದೆ. ನಿನ್ನೆ ಸಂಜೆಯಿಂದಲೇ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಫಿಜಿಯೋಥೆರೆಪಿ ಚಿಕಿತ್ಸೆ ಕೊಡಲಾಗುತ್ತಿದೆ. ಜೈಲಿನ ಹೈ ಸೆಕ್ಯೂರಿಟಿ ಸೆಲ್ ನಲ್ಲೇ ವಿಮ್ಸ್ ವೈದ್ಯರು ಒಂದು ಗಂಟೆ ಫಿಜಿಯೋಥೆರೆಪಿ ಮಾಡಿದ್ದಾರೆ. ಇದರಿಂದ ದರ್ಶನ್ ಕೊಂಚ ರಿಲೀಫ್ ಆಗಿದ್ದಾರೆ. ದರ್ಶನ್ ಬೆನ್ನಿನ ಭಾಗದಲ್ಲಿ ಊತ ಕಾಣಿಸಿಕೊಂಡಿದೆ. ಈಗ ಅವರಿಗೆ ಚಿಕಿತ್ಸೆ ಸಿಗುತ್ತಿರುವ ವಿಚಾರ ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ.
ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ದರ್ಶನ್ ಅವರ ದೇಹವನ್ನು ಸ್ಕ್ಯಾನಿಂಗ್ ಮಾಡಿದ್ದರು. ಈ ವೇಳೆ ಸರ್ಜರಿ ಹಾಗೂ ಫಿಜಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ದರು. ಸದ್ಯ ಸರ್ಜರಿಯನ್ನು ಅವರು ಬೆಂಗಳೂರಿಗೆ ಹೋಗಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ, ಫಿಜಿಯೋಥೆರೆಪಿ ಆರಂಭಿಸಲಾಗಿದೆ.