newsics.com
ಬೆಂಗಳೂರು : ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯ ಜೈಲು ಪಾಲಾಗಿದ್ದಾರೆ. ಬಿಗ್ ಬಾಸ್ ಸೀಸನ್ 11ರಲ್ಲಿ ಚೈತ್ರಾ ಕುಂದಾಪುರ ಅವರು ಮೊದಲ ಬಾರಿಗೆ ಜೈಲಿಗೆ ಹೋಗಿದ್ದಾರೆ.
14 ಸ್ಪರ್ಧಿಗಳಿಗೆ ಬಿಗ್ಬಾಸ್ ಟಾಸ್ಕ್ವೊಂದನ್ನು ನೀಡಿದ್ದರು. ಬಿಗ್ಬಾಸ್ ಮನೆಯಲ್ಲಿ ಅಪ್ರಾಮಾ ಣಿಕ ಯಾರು ಹಾಗೂ ಕುತಂತ್ರಿ ಯಾರು ಅಂತ ಹೇಳಿ ಎಂದಿದ್ದರು.
ಸ್ಪರ್ಧಿಗಳು ಅತಿ ಹೆಚ್ಚಾಗಿ ಹಣೆ ಪಟ್ಟಿಯನ್ನು ಚೈತ್ರಾ ಕುಂದಾಪುರ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಪ್ರಕ್ರಿಯೆಯ ಅನುಸಾರ ಚೈತ್ರಾ ಕುಂದಾಪುರ ಬಿಗ್ ಬಾಸ್ ಜೈಲಿಗೆ ಹೋಗಿದ್ದಾರೆ.
ಬಿಗ್ಬಾಸ್ ಅವರ ಮುಂದಿನ ಆದೇಶದವರೆಗೂ ಚೈತ್ರಾ ಜೈಲಿನಲ್ಲೇ ಇರಬೇಕಾಗುತ್ತದೆ.