newsics.com
ಮೈಸೂರು: ಮುಡಾ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳು ಇಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ದಾಖಲೆ ಪರಿಶೀಲನೆ ಬಳಿಕೆ ಎರಡು ದಿನಗಳ ಕಾಲ ಕಛೇರಿಗೆ ಬೀಗ ಜಡಿದಿದ್ದಾರೆ.
ಅಷ್ಟೇ ಅಲ್ಲ, ಕೆಂಗೇರಿಯಲ್ಲಿರುವ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಮನೆಯ ಮೇಲೂ ಇ.ಡಿ ದಾಳಿ ನಡೆಸಿದೆ. ಮೈಸೂರು ತಹಸೀಲ್ದಾರ್ ಕಚೇರಿಗೆ ನಾಲ್ಕು ಜನ ಇಡಿ ಅಧಿಕಾರಿಗಳು ತೆರಳಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೈಸೂರು ತಾಲೂಕು ವ್ಯಾಪ್ತಿಯಲ್ಲಿನ ಭೂಮಿ ಮಂಜೂರಾದ ಬಗ್ಗೆ ದಾಖಲೆ ಪಡೆದುಕೊಂಡಿದ್ದಾರೆ.
ಇನ್ನು ಮುಡಾ ಕಛೇರಿಗೆ ಬೀಗ ಹಾಕಿರುವ ಇಡಿ, ಮುಂದಿನ ಎರಡು ದಿನಗಳ ಕಾಲ ಇಲಾಖೆಯ ಯಾವ ಕೆಲಸ-ಕಾರ್ಯಗಳು ನಡೆಯುವುದಿಲ್ಲ. ಕಛೇರಿ ತನಿಖೆಯಡಿಯಲ್ಲಿರುವ ಕಾರಣ ಎಲ್ಲಾ ಕೆಲಸಗಳನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರು ಆಧರಿಸಿ ಈ ದಾಳಿ ನಡೆಸಲಾಗಿದೆ. ಮುಡಾ ಅಧಿಕಾರಿಗೆ ಸಮನ್ಸ್ ನೀಡಿದ್ರೂ ದಾಖಲೆ ಕೊಡದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ. ಒಟ್ಟು 20 ಇಡಿ ಅಧಿಕಾರಿಗಳು ದಾಳಿ ನಡೆಸಿ ಹಗರಣಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.