newsics.com
ಗಾಜಾ ಪಟ್ಟಿಯಲ್ಲಿ ಗುರುವಾರ ನಡೆದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ರಾಜಕೀಯ ಬ್ಯೂರೋದ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆಯಾಗಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಇಸ್ರೇಲಿ ಸೇನೆ ಹೇಳಿದೆ.
ಗಾಜಾ ಪಟ್ಟಿಯಲ್ಲಿ ಐಡಿಎಫ್ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಐಡಿಎಫ್ ಮತ್ತು ಶಿನ್ ಬೆಟ್ ಭಯೋತ್ಪಾದಕರಲ್ಲಿ ಒಬ್ಬರು ಯಾಹ್ಯಾ ಸಿನ್ವಾರ್ ಆಗಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ, ಭಯೋತ್ಪಾದಕರ ಗುರುತನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಇಸ್ರೇಲಿ ರಕ್ಷಣಾ ಪಡೆ ತಿಳಿಸಿದೆ.
ಕಳೆದ ವರ್ಷ ಇಸ್ರೇಲ್‌ನಲ್ಲಿ ಅಕ್ಟೋಬರ್ 7 ರಂದು ನಡೆದ ದಾಳಿಯ ಮಾಸ್ಟರ್ ಮೈಂಡ್ ಯಾಹ್ಯಾ ಎಂದು ವರದಿಗಳು ಹೇಳಿವೆ. ಆದರೆ, ಯಾಹ್ಯಾ ಸಿನ್ವಾರ್ ಸಾವನ್ನು ಇಸ್ರೇಲ್ ದೃಢಪಡಿಸಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.
ಬಾಲ ರಾಮನ ದೇವಸ್ಥಾನಕ್ಕೆ ಭೇಟಿ ನೀಡಿದ ಇಸ್ರೇಲ್ ರಾಯಭಾರಿ.. ನಂತರ ಹೇಳಿದ್ದೇನು?
ಕಂಗನಾ ಫ್ಯಾನ್ಸ್ ಗೆ ಗುಡ್ ನ್ಯೂಸ್; ‘ಎಮರ್ಜೆನ್ಸಿ’ ಚಿತ್ರಕ್ಕೆ ಸಿಕ್ತು ಪ್ರಮಾಣಪತ್ರ
ತಂದೆಗೆ ಪ್ಲಾಸ್ಮಾ ದಾನ ಮಾಡಿದ ಅಮೆರಿಕಾದ ಕೋಟ್ಯಾಧೀಶ! ತಂದೆಯ ವಯಸ್ಸನ್ನು 25 ವರ್ಷ ಕಡಿಮೆ ಮಾಡಿದ