newsics.com
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಮಳೆರಾಯನ ಆರ್ಭಟ ಶುರುವಾಗಿದೆ. ಮಳೆ ನೀರು ಎಲ್ಲಡೆ ನುಗ್ಗಿ ಭಾರೀ ಅವಾಂತರಗಳನ್ನು ಸೃಷ್ಟಿಸಿದೆ.
ರಾಜ ಕಾಲುವೆಯ ಕೊಚ್ಚೆ ನೀರು ಮನೆಗಳಿಗೆ ನುಗ್ಗಿರುವುದರಿಂದ ಸೊಳ್ಳೆಗಳ ಕಾಟ ಶುರುವಾಗಿದೆ. ಈ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಮತ್ತೆ ಏರಿಕೆಯ ಎಚ್ಚರಿಕೆಯನ್ನ ವೈದ್ಯರು ನೀಡಿದ್ದಾರೆ.
ಮೂರು ದಿನದಿಂದ ಶುರುಯುತ್ತಿರುವ ಮಳೆಯಿಂದ ನಗರದಲ್ಲಿ ಶೀತ, ಜ್ವರದ ಪ್ರಕರಣಗಳು ಕೂಡ ಹೆಚ್ಚಳಗೊಂಡಿದೆ. ಕುಡಿಯುವ ನೀರಿಗೆ ಕಲುಷಿತ ನೀರು ಮಿಕ್ಸ್ ಆಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ವೈರಲ್ ಫೀವರ್ ಹಾಗೂ ತಂಪಾದ ವಾತವರಣದಿಂದ ನಾನಾ ಆರೋಗ್ಯದ ಸಮಸ್ಯೆ ಕಂಡು ಬರುತ್ತಿವೆ. ಮಳೆಯಿಂದ ಕೊಂಚ ಎಚ್ಚರ ವಹಿಸುವಂತೆ ರಜಧಾನಿಯ ಜನರಿಗೆ ಸಲಹೆ ನೀಡಿದ್ದಾರೆ.