newsics.com
ಮುಂಬೈ : ಲಂಡನ್ ಫಿಲ್ಮ್ ಫೆಸ್ಟಿವಲ್ 2024, ಲಂಡನ್ನ ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಈ ಬಾರಿ ನಡೆಯಿತು. ಗರ್ಭಿಣಿಯಾದ ಬಳಿಕ ಇದೇ ಮೊದಲ ಬಾರಿ ನಟಿ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದರು.
ಮೊದಲ ಬಾರಿ ಬೇಬಿ ಬಂಪ್ಸ್ ಫೋಟೋಗೆ ಪೋಸ್ ಕೊಟ್ಟರು.ಅವರ ಮುಂದಿನ ಪ್ರಾಜೆಕ್ಟ್ ಆದ ಸಿಸ್ಟರ್ ಮಿಡ್ನೈಟ್ ಸಿನಿಮಾದ ಪ್ರಿಮೀಯರ್ನಲ್ಲೂ ಕೂಡ ಭಾಗಿಯಾಗಿದ್ದರು.
ಫೋಲ್ಡೆಡ್ ಹಾಫ್ ಶೋಲ್ಡರ್ನ ಬ್ಲ್ಯಾಕ್ ಗೌನ್ನಲ್ಲಿ ಕಾಣಿಸಿಕೊಂಡ ನಟಿ ರಾಧಿಕಾ ಆಪ್ಟೆ ಅಲ್ಲಿದ್ದ ಕ್ಯಾಮರಾಗಳನ್ನು ತಮ್ಮತ್ತ ಸೆಳೆದರು. ಗೌನ್ಗೆ ಹೊಂದಿಕೊಳ್ಳುವಂತ ಕಪ್ಪು ಬಣ್ಣದ ಲೋವ್ ಹೀಲ್ಸ್ ಧರಿಸಿದ್ದ ರಾಧಿಕಾ ಆಪ್ಟೆ ಕಾರ್ಯಕ್ರಮದಲ್ಲಿ ತಮ್ಮ ಮೊದಲ ಬೇಬಿ ಬಂಪ್ಸ್ ಫೋಟೋ ಕ್ಲಿಕ್ಕಿಸಿಕೊಂಡರು.
ಮದುವೆಯನ್ನು ಅಷ್ಟೇ ಗುಟ್ಟಾಗಿ ಮಾಡಿಕೊಂಡ ರಾಧಿಕಾ ಆಪ್ಟೆ ಗರ್ಭಿಣಿಯಾದ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು. ತಮ್ಮ ಮೊದಲ ಬೇಬಿ ಬಂಪ್ಸ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.