newsics.com
ರಾಯಚೂರು: ಬೃಹತ್ ಗಾತ್ರದ ಕಲ್ಲು ಬಂಡೆ ಬಿದ್ದು ಅಣ್ಣ-ತಂಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಿಂಗಸೂಗೂರು ತಾಲೂಕಿನ ಗೌಡುರು ತಾಂಡದಲ್ಲಿ ಇಂದು ಈ ಘಟನೆ ನಡೆಯಿತು.
ಮಂಜುನಾಥ ಮಾನಪ್ಪ(9), ವೈಶಾಲಿ ಮಾನಪ್ಪ(7) ಅಣ್ಣ-ತಂಗಿಯಾದರೆ, ಮತ್ತೋರ್ವ ಯುವಕ ರಘು ಸಾವನ್ನಪ್ಪಿದವರು.
ಹೊಲದಲ್ಲಿ ಆಟವಾಡಲು ತೆರಳಿದ ಮಕ್ಕಳ ಮೈಮೇಲೆ ದೊಡ್ಡ ಗಾತ್ರದ ಕಲ್ಲು ಬಿದ್ದಿದೆ. ನೋವು ತಾಳಲಾರದೇ ಮಕ್ಕಳು ಜೋರಾಗಿ ಚೀರಾಡಿದ್ದಾರೆ. ಆದರೆ ಬೃಹತ್ ಗಾತ್ರದ ಕಲ್ಲು ಆಗಿದ್ದರಿಂದ ಅವರಿಗೆ ತಕ್ಷಣವೇ ಹೊರಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.