newsics.com
ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ಇತ್ತೀಚೆಗೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಇರುವುದು ದೃಢವಾಗಿದೆ.
ಅವರು ಮನೋವೈಜ್ಞಾನಿಕ ಪರೀಕ್ಷೆಯನ್ನು ತೆಗೆದುಕೊಂಡ ನಂತರ ಎಡಿಎಚ್‌ಡಿ ರೋಗಲಕ್ಷಣಗಳು ಇರುವುದು ಪತ್ತೆಯಾಗಿದೆ. ಅವರು ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದು, ತಮಗೆ ಬಾಲ್ಯದಿಂದಲೂ ಈ ರೋಗ ಇರುವುದಾಗಿ ಹೇಳಿಕೊಂಡಿದ್ದಾರೆ.
‘ನಾನು ಚಿಕ್ಕ ವಯಸ್ಸಿನಿಂದಲೂ ಜೋನ್ ಔಟ್ ಆಗುತ್ತಿದ್ದೆ. ತರಗತಿಯಲ್ಲಿ ಅಥವಾ ಮಾತನಾಡುವಾಗ ಜೋನ್ ಔಟ್ ಆಗುತ್ತಿದ್ದೆ. ಇತ್ತೀಚೆಗೆ ನಾನು ಮಾನಸಿಕ ಪರೀಕ್ಷೆಯನ್ನು ಮಾಡಿಸಿಕೊಂಡಾಗ ಎಡಿಎಚ್‌ಡಿ ಇರುವುದು ಗೊತ್ತಾಯಿತು. ನಾನು ಕ್ಯಾಮೆರಾದ ಮುಂದೆ ಏಕೆ ಮೌನವಾಗಿರುತ್ತಿದ್ದೆ ಎಂದು ನನಗೆ ಆವಾಗ ಅರ್ಥವಾಯಿತು’ ಎಂದಿದ್ದಾರೆ.
ಎಡಿಎಚ್‌ಡಿ ನರಗಳ ಬೆಳವಣಿಗೆಯ ಅಸ್ವಸ್ಥತೆಯಾಗಿದ್ದು, ಇದು ಅನೇಕರಲ್ಲಿ ತುಂಬಾ ಸಾಮಾನ್ಯವಾಗಿದೆ. ಆಲಿಯಾ ಅವರಂತಹ ಅನೇಕ ಜನರು ಬಾಲ್ಯದಿಂದಲೂ ಇದನ್ನ ಅನುಭವಿಸುತ್ತಿದ್ದರೂ ವೃತ್ತಿಪರವಾಗಿ ಯಶಸ್ವಿ ಜೀವನ ನಡೆಸುತ್ತಾರೆ. ಆದಾಗ್ಯೂ ಇದು ಜೀವನಶೈಲಿಗೆ ಅಡ್ಡಿಪಡಿಸಲು ಪ್ರಾರಂಭಿಸಿದಾಗ ವೈದ್ಯರನ್ನು ಭೇಟಿಯಾಗುವುದು ಒಳಿತು.