newsics.com
ಮುಂಬೈ: ದಿ ಆರ್ಚೀಸ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿರುವ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವರ್ಕೌಟ್ ವೀಡಿಯೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ.
ಸುಹಾನಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವೀಡಿಯೊದಲ್ಲಿ, ಪರ್ಸನಲ್ ಟ್ರೈನರ್ ಮಾರ್ಗದರ್ಶನದಲ್ಲಿ ಪುಲ್-ಅಪ್, ಪುಷ್-ಅಪ್, ಡೆಡ್ಲಿಫ್ಟ್ ಮತ್ತು ಹಿಪ್ ಥ್ರಸ್ಟ್ಗಳು ಸೇರಿದಂತೆ ತೀವ್ರವಾದ ವರ್ಕೌಟ್ ಸರಣಿಯನ್ನು ಸುಹಾನಾ ಮಾಡುತ್ತಿರುವುದನ್ನ ಕಾಣಬಹುದು. ಸುಹಾನಾ ಪುಲ್-ಅಪ್ ಪ್ರದರ್ಶನದಿಂದ ಪ್ರಭಾವಿತರಾದ ಫ್ಯಾನ್ ಒಬ್ಬರು, ಇಷ್ಟೊಂದು ಕಷ್ಟದ ಪುಲ್ ಅಪ್ ಹೇಗೆ ಮಾಡಿದಿರಿ ಎಂದು ಕೇಳಿದ್ದಾರೆ. ‘ಸ್ಟ್ರಗಲ್ನಿಂದ’ ಎಂದು ಸುಹಾನಾ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಸುಹಾನಾ, ದಿ ಆರ್ಚೀಸ್ನ ನಂತರ, ತಂದೆ ಶಾರುಖ್ ಖಾನ್ ಅವರೊಂದಿಗೆ ಸುಜೋಯ್ ಘೋಷ್ ನಿರ್ದೇಶನದ ಮತ್ತು ಸಿದ್ಧಾರ್ಥ್ ಆನಂದ್ ನಿರ್ಮಾಣದ ಕಿಂಗ್ನಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈಗಾಗಲೇ ಈ ಪ್ರಾಜೆಕ್ಟ್ ಎಲ್ಲರ ಗಮನ ಸೆಳೆದಿದ್ದು, ತಂದೆ-ಮಗಳ ಜೋಡಿಯನ್ನ ಆನ್-ಸ್ಕ್ರೀನ್ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.